ಜಮ್ಮು ಮತ್ತು ಕಾಶ್ಮೀರ : ಜಮ್ಮು ಮತ್ತ ಕಾಶ್ಮೀರ ಮಜೀನ್ ನ ಸುಂದರವಾದ ಶಿವಾಲಿಕ್ ಕಾಡುಗಳ ಮಧ್ಯೆ ಇರುವ ತಿರುಪತಿ ಬಾಲಾಜಿ ದೇವಾಲಯವು ಜೂ.8ರಂದು ಭಕ್ತರಿಗೆ ಬಾಗಿಲು ತೆರೆಯಲು ಸಜ್ಜಾಗಿದೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಇಂದು ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವನ್ನು ಉದ್ಘಾಟಿಸಲಿದ್ದಾರೆ.
62 ಎಕರೆ ಭೂಮಿಯಲ್ಲಿ ನಿರ್ಮಿಸಲಾದ ಈ ದೇವಾಲಯವು ಜಮ್ಮು ಪ್ರದೇಶದ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಧಾರ್ಮಿಕ ಮತ್ತು ತೀರ್ಥಯಾತ್ರೆ ಪ್ರವಾಸೋದ್ಯಮವನ್ನು ಹೆಚ್ಚಿಸುವ ನಿರೀಕ್ಷೆ ಇದೆ. 30 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ತಿರುಪತಿ ಬಾಲಾಜಿ ದೇವಾಲಯವು ಆಂಧ್ರಪ್ರದೇಶದ ಹೊರಗೆ ನಿರ್ಮಿಸಲಾದ ಆರನೇ ಬಾಲಾಜಿ ದೇವಾಲಯವಾಗಿದೆ. ಇತರ ಐದು ಬಾಲಾಜಿ ದೇವಾಲಯಗಳನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಹೈದರಾಬಾದ್, ಚೆನ್ನೈ, ಕನ್ಯಾಕುಮಾರಿ, ದೆಹಲಿ ಮತ್ತು ಭುವನೇಶ್ವರದಲ್ಲಿ ನಿರ್ಮಿಸಲಾಗಿದೆ.









































