ವಿ. ಸುನೀಲ್‌ ಕುಮಾರ್ ಆನೆಗುಂದಿ ಮಹಾಸಂಸ್ಥಾನಕ್ಕೆ ಭೇಟಿ

ಕಾರ್ಕಳ : ಕಾರ್ಕಳ : ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸುನೀಲ್‌ ಕುಮಾರ್‌ ಅವರು ಎ. 13 ರಂದು ಪಡುಕುತ್ಯಾರು ಆನೆಗುಂದಿ ಸರಸ್ವತೀ ಪೀಠ ಮಹಾಸಂಸ್ಥಾನಕ್ಕೆ ಭೇಟಿ ನೀಡಿ ಪೀಠಾಧೀಶ್ವರರಾದ ಅನಂತ ಶ್ರೀ ವಿಭೂಶಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಅನುಗ್ರಹ ಮಂತ್ರಾಕ್ಷತೆ ಪಡೆದರು. ಬಳಿಕ ಮಹಾಸಂಸ್ಥಾನದ ವತಿಯಿಂದ ಸುನೀಲ್‌ ಕುಮಾರ್ ಅವರನ್ನು ಅಭಿನಂದಿಸಲಾಯಿತು. ಮಹಾಸಂಸ್ಥಾನದ ಅಧ್ಯಕ್ಷ ವಡೇರ್‌ ಹೋಬಳಿ ಶ್ರೀಧರ್‌ ಆಚಾರ್ಯ, ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೋಕ್ತೆಸರ ಶಿಲ್ಪಿ ರಾಮಚಂದ್ರ ಆಚಾರ್ಯ, ಜೊತೆ ಮೊಕ್ತೇಸರರಾದ ಪಿ. ರವಿ ಆಚಾರ್ಯ ಪೆರ್ವಾಜೆ, ಸುರೇಶ್‌ ಆಚಾರ್ಯ ನಿಟ್ಟೆ, ಮಾಜಿ ಮೋಕ್ತೆಸರ ಹರೀಶ್‌ ಆಚಾರ್ಯ, ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರಮೇಶ್‌ ಆಚಾರ್ಯ, ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಜ್ಯೋತಿ ರಮೇಶ್‌, ಕಾರ್ಯದರ್ಶಿ ಕವಿತಾ ಹರೀಶ್‌, ನಿಟ್ಟೆ ಗ್ರಾ. ಪಂ. ಉಪಾಧ್ಯಕ್ಷೆ ಸುಮಿತ್ರಾ ಲಕ್ಷ್ಮಣ್‌ ಆಚಾರ್ಯ, ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ನಿಖಿಲ್‌ ಆಚಾರ್ಯ, ನಗರ ಯುವಮೋರ್ಚಾ ಕಾರ್ಯದರ್ಶಿ ಪ್ರೀತುಲ್‌ ಆಚಾರ್ಯ, ನಿತ್ಯಾನಂದ ಆಚಾರ್ಯ, ಸತೀಶ್‌ ಆಚಾರ್ಯ ಮತ್ತು ವಿಶ್ವಕರ್ಮ ಸಮಾಜದ ಬಂಧುಗಳು ಉಪಸ್ಥಿತರಿದ್ದರು.

















































error: Content is protected !!
Scroll to Top