ಸುಡುಬಿಸಿಲಿಗೆ ಕಾರ್ಕಳದಲ್ಲಿ ಕಾರಿನ ಗಾಜು ಛಿದ್ರ

ಕಾರ್ಕಳ : ಕರಾವಳಿ ಜಿಲ್ಲೆಗಳಲ್ಲಿ ಬಿಸಿಲ‍ ಧಗೆ ದಿನದಿಂದ ದಿನಕ್ಕೆ ಏರುತ್ತಿದ್ದು ರಣಬಿಸಿಲಿನಿಂದ ಜನತೆ ಹೈರಾಣಾಗಿದ್ದಾರೆ. ನದಿ, ಕೆರೆಗಳು ಬತ್ತಿ ಹೋಗುತ್ತಿದ್ದು ಪ್ರಾಣಿ ಪಕ್ಷಿಗಳು ನೀರಿಗಾಗಿ ಪರಿತಪಿಸುವಂತಾಗಿದೆ. ಬಿಸಿಲ ಬೇಗೆಗೆ ನಿಲ್ಲಿಸಿದ್ದ ಕಾರಿನ ಹಿಂಬದಿ ಗಾಜು ಪುಡಿ ಪುಡಿಯಾಗಿರುವ ಘಟನೆ ಕಾರ್ಕಳದಲ್ಲಿ ಏ. 13ರಂದು ನಡೆದಿದೆ. ಕಾರಿನ ಒಳಗಡೆ ಯಾರು ಇಲ್ಲದ ಕಾರಣ ಯಾವುದೇ ಅನಾಹುತವಾಗಿಲ್ಲ. ವಿಪರೀತ ಸೆಖೆ, ಬಿಸಿಲ ವಾತಾವರಣದಿಂದ ಬಳಲಿ ಬೆಂಡಾಗಿರುವ ಜನತೆಗೆ ಇಂತಹ ಅವಘಡ ಮತ್ತಷ್ಟು ಆತಂಕವನ್ನುಂಟು ಮಾಡಿದೆ.

















































error: Content is protected !!
Scroll to Top