ಚಿನ್ನಾಭರಣ ಕಳವು

ನಿಟ್ಟೆ : ಕಾರ್ಕಳ : ತಾಲೂಕು ನಿಟ್ಟೆ ಗ್ರಾಮದ ಬೈದಾಲ್ ರಸ್ತೆಯಲ್ಲಿರುವ ಲೂಸಿ ಕ್ಯಾಸ್ತಲಿನೊ (79) ಎಂಬುವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಕಬ್ಬಿಣದ ಕಪಾಟಿನಲ್ಲಿಟ್ಟಿದ್ದ ಚಿನ್ನದ ಆಭರಣಗಳನ್ನು ಕಳವು ಗೈದಿರುವ ಘಟನೆ ಏ. 10ರಂದು ಸಂಭವಿಸಿದೆ. 2 ಜೊತೆ ಕಿವಿಯ ಬೆಂಡೊಲೆ, 2 ಬಳೆಗಳು, 3 ಉಂಗುರು, 1 ಹವಳದ ಸರ, 1 ಚಿನ್ನದ ಸರ ಮತ್ತು 2 ಬೇಬಿ ಬ್ಯಾಂಗಲ್ಸ್ ಸೇರಿದಂತೆ 10 ಪವನ್ ಚಿನ್ನಾಭರಣ ಕಳವಾಗಿದೆ. ಲೂಸಿ ಕ್ಯಾಸ್ತಲಿನೊ ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.









































































































error: Content is protected !!
Scroll to Top