ಮಾವಿನ ಮರದಿಂದ ಬಿದ್ದು ವ್ಯಕ್ತಿಯ ದುರ್ಮರಣ

ಹೆಬ್ರಿ : ವರಂಗ ಗ್ರಾಮದ ಮುನಿಯಲ್ ಬೈಲು ಪಾದೆಮನೆಯ ಕೃಷಿಕ ಮಂಜುನಾಥ ನಾಯ್ಕ (37) ಎಂಬವರು ಶುಕ್ರವಾರ ಸೊಪ್ಪು ಕಡಿಯುತ್ತಿರುವಾಗ ಮರದಿಂದ ಬಿದ್ದು ಮೃತಪಟ್ಟಿದ್ದಾರೆ. ವರಂಗ ಗ್ರಾಮದ ಮಾತಿಬೆಟ್ಟು ಎಂಬಲ್ಲಿ ರಸ್ತೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿರುವ ಮಾವಿನ ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ ಕಾಲು ಜಾರಿ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಎಡಸೊಂಟದ ಬಳಿ ತೀವ್ರ ಸ್ವರೂಪದ ಮೂಳೆ ಮುರಿತವಾಗಿತ್ತು. ಎದೆಗೆ ಗುದ್ದಿದ ನೋವಾಗಿ ಅವರು ಮಾತನಾಡುತ್ತಿರಲಿಲ್ಲ. ಕೂಡಲೇ ಅಜ್ಜರಕಾಡು ಆಸ್ಪತ್ರಗೆ ಒಯ್ದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಪತ್ನಿ ವಿನೋದಿನಿ ನೀಡಿದ ದೂರಿನ ಪ್ರಕಾರ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.























error: Content is protected !!
Scroll to Top