ಕಾರ್ಕಳ : ಐ.ಸಿ.ಎ.ಐ 2026ರ ಮೇಯಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಹುಕ್ರಟ್ಟೆಯ ಪುನೀತ್ ಶೆಟ್ಟಿ ತೇರ್ಗಡೆಯಾಗಿದ್ದಾರೆ. ಇವರು ಹುಕ್ರಟ್ಟೆ ಮರ್ದಿನಿ ನಿಲಯ ದಿ. ಜಯರಾಮ ಶೆಟ್ಟಿ ಮತ್ತು ರತ್ನ ದಂಪತಿ ಪುತ್ರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೊಡಂಗೈ ಶಾಲೆಯಲ್ಲಿ, ಪ್ರೌಢಶಾಲೆಯನ್ನು ಚೌಕಿಯಂಗಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದಿದ್ದು, ಬಜಗೋಳಿಯಲ್ಲಿ ಪಿಯು ಶಿಕ್ಷಣವನ್ನು ಮತ್ತು ಪದವಿ ಶಿಕ್ಷಣವನ್ನು ಕಾರ್ಕಳ ಎಂ.ಪಿ.ಎಂ. ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಕಾರ್ಕಳದ ಸಿ.ಎ. ಪ್ರಭಾತ್ ಕುಮಾರ್ ಅವರಿಂದ ಸಿಎ ಪರೀಕ್ಷಾ ತರಬೇತಿ ಪಡೆದಿರುತ್ತಾರೆ.
ಸಿಎ ಅಂತಿಮ ಪರೀಕ್ಷೆಯಲ್ಲಿ ಹುಕ್ರಟ್ಟೆಯ ಪುನೀತ್ ಶೆಟ್ಟಿ ತೇರ್ಗಡೆ















