ರವಳನಾಥ ಪ್ರಭು ನಿಧನ

ಕಾರ್ಕಳ : ಎಳ್ಳುಜ್ಯೂಸ್‌ ರವಳನಾಥ ಎಂದೇ ಖ್ಯಾತರಾಗಿದ್ದ ಕಾರ್ಕಳದ ರವಳನಾಥ ಪ್ರಭು (84) ಅವರು ಜೂ. 17ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಕಾರ್ಕಳದಲ್ಲಿ ಪ್ರಥಮವಾಗಿ ಎಳ್ಳುಜ್ಯೂಸ್‌ ಪರಿಚಯಿಸಿದ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಕೊಡುಗೈ ದಾನಿಯಾಗಿದ್ದ ಇವರು ದೇವಸ್ಥಾನಗಳಿಗೆ, ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಾಗಿಯೂ ಯಾವುದೇ ಪ್ರಚಾರ ಬಯಸಿದವರಲ್ಲ. ಮೃತರು ಪುತ್ರರಾದ ವಿನಾಯಕ ಪ್ರಭು, ವಿಜೇಂದ್ರ ಪ್ರಭು, ವಿದ್ಯಾನಂದ ಪ್ರಭು ಅವರನ್ನು ಅಗಲಿದ್ದಾರೆ.























error: Content is protected !!
Scroll to Top