ಉಡುಪಿ : ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ಜೂ. 18ರಂದು ತೆಂಕನಿಡಿಯೂರು ಗ್ರಾಮದ ಹೋಂ ಸ್ಟೇಯಲ್ಲಿ ನಡೆದಿದೆ.
ಹೂಡೆಯ ನಾಜೀಲ್ (31), ಕಾಪು ಮಂಚಕಲ್ ಗ್ರಾಮದ ಮೊಹಮ್ಮದ್ ಅಜರುದ್ದೀನ್ (42), ಮಂಚಕಲ್‌ನ ಮೊಹಮ್ಮದ್ ಅಫನಾನ್( 19), ತೆಂಕನಿಡಿಯೂರಿನ ವಿಘ್ನೇಶ (35), ತೆಂಕನಿಡಿಯೂರಿನ ಬಸವರಾಜು (36), ನೇಪಾಳ ಮೂಲದ ರಾಮ್ ಸಿಂಗ್, ಪೆರಂಪಳ್ಳಿಯ ಧನ್ವತ್ ರಿಕೀತ್(36) ಮತ್ತು ಒಡಿಶಾ ಮೂಲದ ಗೀತಾಜಂಲಿ ಜಿನಾ (44) ಬಂಧಿತ ಆರೋಪಿಗಳು.
ಮಾದಕವಸ್ತುಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮಲ್ಪೆ ಪೊಲೀಸರು ಹೋಂ ಸ್ಟೇ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಎಫ್.ಎಂ. ನಾಜಿಲ್, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ಅಫ್ಘಾನ್ ಹಾಗೂ ವಿಘ್ನೇಶ್ ಎಂಬ ನಾಲ್ವರನ್ನು ಪರಿಶೀಲಿಸಿದಾಗ ಅವರು ಮಾದಕ ವಸ್ತು ಸೇವನೆ ಮಾಡಿರುವುದು ಕಂಡುಬಂದಿದೆ. ಶೋಧ ನಡೆಸಿದ ವೇಳೆ 33.81 ಗ್ರಾಂ ಗಾಂಜಾ, 9.73 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. 5 ಮೊಬೈಲ್ ಫೋನ್‌ಗಳು ಹಾಗೂ ಇತರ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಪೊಲೀಸರು ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಅನಧೀಕೃತವಾಗಿ ಹೋಂ ಸ್ಟೇ ನಡೆಸದಂತೆ ನೋಟಿಸ್ ನೀಡಿದ್ದರೂ ಅಕ್ರಮವಾಗಿ ಹೋಂ ಸ್ಟೇ ನಡೆಸಿ ಮಾದಕ ವಸ್ತುಗಳ ಸೇವನೆಗೆ ಕಾರಣವಾದ ಹೋಂ ಸ್ಟೇ ಮಾಲಕ ಧನ್ವನ್ ರಿಕಿತ್ ಮತ್ತು ಕೆಲಸಗಾರ ಬಸವರಾಜ್ ನನ್ನು ಬಂಧಿಸಲಾಗಿದೆ.















