ಕಾರ್ಕಳ : ಕಾರ್ಕಳ ಯುವ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ಮುಖಂಡ ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧೀಜಿಯವರ ಹುಟ್ಟು ಹಬ್ಬವನ್ನು ಜರಿಗುಡ್ಡೆ ಸುರಕ್ಷಾ ಆಶ್ರಮದಲ್ಲಿ ಧನ ಸಹಾಯ, ಸಹಬೋಜನ, ಮತ್ತು ಸಿಹಿತಿಂಡಿ ವಿತರಿಸುವ ಮೂಲಕ ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಮಾತನಾಡಿ, ರಾಹುಲ್ ಗಾಂಧಿ ಅವರಿಗೆ ದೇಶದ ಎಲ್ಲಾ ಸಮಸ್ಯೆಗಳ ಅರಿವಿದೆ. ರೈತರ, ವಿದ್ಯಾರ್ಥಿಗಳ, ಕಾರ್ಮಿಕರ, ಮಹಿಳೆಯರ ಮತ್ತು ಹಿಂದುಳಿದ ವರ್ಗಗಳ ಜನರ ಪರವಾದ ಅವರ ಧ್ವನಿ ಒಂದು ದಿನ ಅವರನ್ನು ದೇಶದ ಪ್ರಧಾನಿಯನ್ನಾಗಿಸುತ್ತದೆ ಎಂದು ಹೇಳಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಅಭಿಷೇಕ್, ದೀಪಕ್ ಶೆಟ್ಟಿ, ದೀಕ್ಷಿತ್ ಶೆಟ್ಟಿ, ಹೇಮಂತ್ ಆಚಾರ್ಯ, ವಿಶಾಕ್ ದೇವಾಡಿಗ, ಕೃಷ್ಟನ್ ಪಿಂಟೋ, ಪರ್ಧೀನ್ ಅಸಾದ್, ಸುನೀಲ್ ಕಡ್ತಲ, ಕೀರ್ತನ್ ದೇವಾಡಿಗ, ವಿಘೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.



















