ಜೋಡುಕಟ್ಟೆಯಲ್ಲಿ ಬಸ್‌ – ರಿಕ್ಷಾ ಡಿಕ್ಕಿ

ಕಾರ್ಕಳ : ಖಾಸಗಿ ಬಸ್‌ ಮತ್ತು ರಿಕ್ಷಾ ನಡುವೆ ಡಿಕ್ಕಿಯಾದ ಘಟನೆ ಜೂ. 19ರಂದು ಬೆಳಿಗ್ಗೆ ಮಿಯ್ಯಾರು ಜೋಡುಕಟ್ಟೆಯಲ್ಲಿ ನಡೆದಿದೆ. ಬಜಗೋಳಿಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಬಸ್‌ ಮತ್ತು ಅದೇ ರಸ್ತೆಯಲ್ಲಿ ಮುಂಭಾಗದಲ್ಲಿ ಬರುತ್ತಿದ್ದ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಪರಿಣಾಮವಾಗಿ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್‌ನ ಮುಂಭಾಗ ಜಖಂಗೊಂಡಿರುತ್ತದೆ. ಗಾಯಾಳು ರಿಕ್ಷಾ ಚಾಲಕ ಚಂದ್ರಕಾಂತ್‌ ಶೆಣೈ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿದೆ. ಅವೈಜ್ಞಾನಿಕ ರಸ್ತೆ ತಿರುವು ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.































































error: Content is protected !!
Scroll to Top