ಕಾರ್ಕಳ : ನಿಟ್ಟೆ ಡಾ.ಎನ್.ಎಸ್.ಎ.ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಜೂ. 20ರಂದು ಸಂಭ್ರಮ ಶನಿವಾರದ ಪ್ರಯುಕ್ತ ವಿಶೇಷ ಚೇತನವುಳ್ಳ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಶಾಲೆಯ ಹಿರಿಯ ಶಿಕ್ಷಕ ಚಂದ್ರ ನಾಯ್ಕ್ ಟಿ. ವಿಶೇಷ ಚೇತನವುಳ್ಳ ಸಾಧಕರ ಪರಿಚಯ ಹಾಗೂ ಸಾಧನೆಗಳ ಕುರಿತು ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಧೈರ್ಯ ಕಳೆದುಕೊಳ್ಳದೆ ಬದುಕು ನಡೆಸಬೇಕು ಎಂದು ಭರವಸೆ ತುಂಬಿದರು. ದೈಹಿಕ ಶಿಕ್ಷಕಿ ಉಷಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿಟ್ಟೆ ಡಾ.ಎನ್.ಎಸ್.ಎ.ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆ – ಸಂಭ್ರಮ ಶನಿವಾರ


































