ಕಾರ್ಕಳ : ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ. 16ರಂದು ಜಾಲಿ ಬಾಯ್ಸ್ ಬಜಗೋಳಿ ಹಾಗೂ ವಿವಿಧ ದಾನಿಗಳಿಂದ ಸಮವಸ್ತ್ರ ಮತ್ತು ಶೈಕ್ಷಣಿಕ ಪರಿಕರಗಳ ವಿತರಣೆ ಹಾಗೂ ನೂತನವಾಗಿ ಆರಂಭವಾಗಿರುವ ಎಐ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
80 ಸಾವಿರ ಮೌಲ್ಯದ ಶೈಕ್ಷಣಿಕ ಪರಿಕರ ವಿತರಣೆ
ಜಾಲಿ ಬಾಯ್ಸ್ ಬಜೆಗೋಳಿ ತಂಡವು ಕಳೆದ ಹಲವಾರು ವರ್ಷದಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕವನ್ನು ವಿತರಿಸುತ್ತಾ ಬರುತ್ತಿದ್ದು, ಮಾಳ ಗುರುಕುಲ ಅನುದಾನಿತ ಶಾಲೆಗೆ ಸತತ ಎರಡನೇ ವರ್ಷ ಸುಮಾರು 80 ಸಾವಿರಕ್ಕೂ ಅಧಿಕ ಮೌಲ್ಯದ ನೋಟ್ ಪುಸ್ತಕ ಹಾಗೂ ಲೇಖನಿ ಸಾಮಾಗ್ರಿಗಳನ್ನು ನೀಡಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಜಾನನ ಮರಾಠೆ ವಹಿಸಿದ್ದರು. ಜನರೇಶನ್ ನೆಕ್ಸ್ಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಫೌಂಡರ್ ಗುರುರಾಜ ಡಿ. ಹೆಗಡೆ, ಸಂಜನಾ ಮರಾಠೆ, ಜಾಲಿ ಬಾಯ್ಸ್ ಬಜೆಗೋಳಿ ಇದರ ಮುಖ್ಯಸ್ಥರಾದ ರಜತ್ ರಾಮ್ ಮೋಹನ್, ಪ್ರಶಾಂತ್ ಕೋಟ್ಯಾನ್, ಪ್ರಶಾಂತ್ ಕೋಟ್ಯಾನ್ ಮತ್ತು ಸುರೇಶ್ ಕುಮಾರ್, ಎಐ ತರಬೇತುದಾರರಾದ ಗುಣ ಶಿಲ್ಪ, ವಿ.ಎಮ್. ಮೈಕಲ್, ಶಾಲಾ ಸಂಚಾಲಕ ಸುಧಾಕರ ಡೊಂಗ್ರೆ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ ಉಪಸ್ಥಿತರಿದ್ದರು.


























