ನ.1 ಭಾನುವಾರವಾದ್ರೂ ‌ರಾಜ್ಯೋತ್ಸವ ಆಚರಣೆ ಕಡ್ಡಾಯ

ಬೆಂಗಳೂರು: ನ. 1 ಭಾನುವಾರವಾದರೂ ಎಲ್ಲಾ ಶಾಲೆಗಳಲ್ಲಿಯೂ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದೆ.

ರಾಜ್ಯದ ಸರ್ಕಾರಿ ಶಾಲೆಗಳ ಜೊತೆಗೆ ಅನುದಾನರಹಿತ ಖಾಸಗಿ ಶಾಲೆಗಳು ಸಹ ರಾಜ್ಯೋತ್ಸವ ಆಚರಣೆಯನ್ನು ಕಡ್ಡಾಯವಾಗಿ ಮಾಡಬೇಕು. ರಾಜ್ಯೋತ್ಸವ ಈ ಬಾರಿ ಭಾನುವಾರ ಬಂದಿದೆ. ರಜೆ ಎಂದು ಭಾವಿಸಬೇಕಾಗಿಲ್ಲ ಎಂದು ಇಲಾಖೆ ತಿಳಿಸಿದೆ.

ಇದಕ್ಕೆ ಹಲವು ಶಾಲೆಗಳ ಆಡಳಿತ ಮಂಡಳಿಗಳು ಆಕ್ಷೇಪ ಎತ್ತಿವೆ. ಭಾನುವಾರ ನಾವು ರಾಜ್ಯೋತ್ಸವ ಆಚರಣೆ ಮಾಡಲು ತಯಾರಿದ್ದೇವೆ ಆದರೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಅಷ್ಟೇ ಅಲ್ಲದೇ ಐದು ತಿಂಗಳಿನಿಂದ ಭಾನುವಾರವೂ ರಜೆ ಇಲ್ಲದಂತೆ ಎಸ್‌ಐಆರ್ ಕೆಲಸವನ್ನು ಶಿಕ್ಷಕರು ಮಾಡಿದ್ದಾರೆ. ಎಸ್‌ಐಆರ್ ನಂತರ ಇದೇ ಮೊದಲ ಬಾರಿಗೆ ಭಾನುವಾರ ರಜೆ ಸಿಕ್ಕಿದೆ ಎನ್ನುವುದು ಕೆಲ ಶಿಕ್ಷಕರ ವಾದವಾಗಿದೆ.

















































































error: Content is protected !!
Scroll to Top