ಎಂಬ್ರಾಯ್ಡರಿ ಅಂಗಡಿ ಮಾಲಕನ ‌ಮೇಲೆ ಆ್ಯಸಿಡ್ ದಾಳಿ: ಆರೋಪಿ ಪೊಲೀಸ್ ಬಲೆಗೆ

ಉಡುಪಿ: ಮನೆ ಬಾಡಿಗೆಗಾಗಿ ಠೇವಣಿ ನೀಡಿದ ಹಣವನ್ನು ಹಿಂದಿರುಗಿಸಿಲ್ಲ ಎಂದು ಆಕ್ರೋಶಿತನಾದ ವ್ಯಕ್ತಿಯೊಬ್ಬ ಎಂಬ್ರಾಯ್ಡರಿ ಅಂಗಡಿಯ ಮಾಲಕನ ‌ಮೇಲೆ ಆ್ಯಸಿಡ್ ಎರಡು, ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಆರೋಪಿ ಸುರೇಶ್ ಆಚಾರ್ಯ(48) ನನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಇಂದ್ರಾಳಿಯ ಬುಡ್ನಾರು ನಿವಾಸಿ ನವೀನ್ ಕುಮಾರ್ ಅವರಿಗೆ ಘಟನೆಯಲ್ಲಿ ಗಂಭೀರ ಪ್ರಮಾಣದಲ್ಲಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವಿವರ:

ನವೀನ್ ಅವರ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಆರೋಪಿ ಸುರೇಶ್ ಆಚಾರ್ಯ, ಮನೆ ಖಾಲಿ ಮಾಡುವ ವೇಳೆ ತಾನು ನೀಡಿದ್ದ 20 ಸಾವಿರ ರೂ. ಡೆಪಾಸಿಟ್ ಹಣವನ್ನು ಹಿಂದಿರುಗಿಸುವಂತೆ ಕೇಳಿದ್ದ. ಆದರೆ, ಸುಸ್ಥಿತಿಯಲ್ಲಿದ್ದ ಬಾಡಿಗೆ ಮನೆಯನ್ನು ಹಾಳು ಮಾಡಿದ್ದ ಎಂಬ ಕಾರಣಕ್ಕೆ ನವೀನ್ ಡೆಪಾಸಿಟ್ ಮೊತ್ತವನ್ನು ಹಿಂದಿರುಗಿಸಿರಲಿಲ್ಲ ಎನ್ನಲಾಗಿದೆ.

ಈ ವಿಚಾರವಾಗಿ ಈ ಹಿಂದೆಯೂ ಇಬ್ಬರ ನಡುವೆ ಚರ್ಚೆ ನಡೆದಿದ್ದು, ನಿನ್ನೆ ಮತ್ತೆ ನವೀನ್ ಅವರ ಅಂಗಡಿಗೆ ತೆರಳಿದ್ದ ಆರೋಪಿ ಹಣದ ವಿಚಾರವಾಗಿ ಮಾತುಕತೆ ನಡೆಸಿದ್ದ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಸುರೇಶ್‌ ಆಚಾರ್ಯ, ತನ್ನ ಸ್ಕೂಟಿಯಲ್ಲಿ ತಂದಿದ್ದ ತಲವಾರು ಹಾಗೂ ಆಸಿಡ್‌ ಹೊರತೆಗೆದು ದಾಳಿ ನಡೆಸಿ, ಕೃತ್ಯದ ಬಳಿಕ ಅದೇ ಸ್ಕೂಟಿಯಲ್ಲಿ ಪರಾರಿಯಾಗಿ ತಿಳಿದು ಬಂದಿದೆ.

























































































































error: Content is protected !!
Scroll to Top