ರಾಜ್ಯದಲ್ಲಿ ಹಾಲಿನ ದರ 8 ರೂ. ಏರಿಕೆಗೆ ಸಚಿವ ಸಂಪುಟ ಸಮ್ಮತಿ

ಬೆಂಗಳೂರು: ರಾಜ್ಯದಲ್ಲಿ ಹಾಲಿನ ದರ ಏರಿಕೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯ ಸಚಿವ ಸಂಪುಟ ಸಮ್ಮತಿಸಿದೆ.

ಹಾಲಿನ ದರ 8 ರೂ. ಏರಿಕೆಯಾಗಲಿದ್ದು, 90:10 ಅನುಪಾತದಲ್ಲಿ ಹಾಲು ಉತ್ಪಾದಕರಿಗೆ ಮತ್ತು ಒಕ್ಕೂಟಗಳಿಗೆ ಈ ಮೊತ್ತ ಹಂಚಿಕೆಯಾಗಲಿದೆ.

ಏರಿಕೆ ಮೊತ್ತದಲ್ಲಿ 7 ರೂ. ಹಾಲು ಉತ್ಪಾದಕರು ಮತ್ತು 1 ರೂ. ಒಕ್ಕೂಟಗಳಿಗೆ ದೊರೆಯಲಿದೆ.

ಹಾಗೆಯೇ ಬಸ್ ಟಿಕೆಟ್ ದರ ಏರಿಕೆಗೆ ಕುರಿತು ಸಂಪುಟದಲ್ಲಿ ಚರ್ಚೆಯಾಗಿದೆ. ಈ ನಿರ್ಧಾರವನ್ನು ಸಂಪುಟ ಸಾರಿಗೆ ಇಲಾಖೆಗೆ ಬಿಟ್ಟಿದೆ. ಇಲಾಖೆ ಪರಿಸ್ಥಿತಿ ಅವಲೋಕಿಸಿ ದರ ಏರಿಕೆ ಮಾಡುವ ಸಾಧ್ಯತೆಯಿದ್ದು, ನವೆಂಬರ್ 5 ರಂದು ಸಾರಿಗೆ ದರ ಹೆಚ್ಚಳ ತೀರ್ಮಾನವಾಗಲಿದೆ.



















































































error: Content is protected !!
Scroll to Top