9, 10ನೇ ತರಗತಿಗೆ ಪಿಯುಸಿ ಉಪನ್ಯಾಸಕರಿಂದ ಬೋಧನೆ ಕಡ್ಡಾಯ – ಸರಕಾರದಿಂದ ಹೊಸ ನಿಯಮ

ಬೆಂಗಳೂರು : ಪ್ರೌಢಶಾಲೆಗಳಲ್ಲಿ ಎದುರಾಗಿರುವ ಶಿಕ್ಷಕರ ಕೊರತೆಯನ್ನು ನೀಗಿಸುವ ಸಲುವಾಗಿ, ಪಿಯು ಉಪನ್ಯಾಸಕರು ಇನ್ನು ಮುಂದೆ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿ ಬೋಧನೆ ಮಾಡಬೇಕೆಂಬ ಮಹತ್ವದ ನಿಯಮವನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಪದವಿ ಪೂರ್ವ ಶಿಕ್ಷಣ ನೇಮಕಾತಿ ನಿಯಮಗಳು -2013ಕ್ಕೆ ಸರ್ಕಾರ ಮಹತ್ವದ ತಿದ್ದುಪಡಿ ಮಾಡಿದೆ. ತಿದ್ದುಪಡಿಯ ಕರಡು ನಿಯಮವನ್ನು ಸರ್ಕಾರ ಈಗಾಗಲೇ ಪ್ರಕಟ ಮಾಡಿದೆ. ಕರಡು ನಿಯಮಕ್ಕೆ 7 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಹಳೆಯ ನಿಯಮದ ಪ್ರಕಾರ, ಪಿಯು ಉಪನ್ಯಾಸಕರಿಗೆ ಕೇವಲ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಮಾತ್ರ ಬೋಧಿಸುವ ಜವಾಬ್ದಾರಿಯಿತ್ತು. ಆದರೆ ಈಗಿನ ತಿದ್ದುಪಡಿಯಿಂದಾಗಿ ಹೈಸ್ಕೂಲ್‌ ಹಂತಕ್ಕೂ ಅವರ ಸೇವೆ ವಿಸ್ತರಣೆಯಾಗಲಿದೆ. ಈ ನಿಯಮಕ್ಕೆ ಪದವಿಪೂರ್ವ ಉಪನ್ಯಾಸಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ನಿಯಮವನ್ನು ಪುನರ್‌ ಪರಿಶೀಲಿಸುವಂತೆ ಆಗ್ರಹಿಸಿದೆ.





































































error: Content is protected !!
Scroll to Top