ಹಿಟಾಚಿ ಯಂತ್ರಕ್ಕೆ ಕಿಡಿಗೇಡಿಗಳಿಂದ ಬೆಂಕಿ : 15 ಲ.ರೂ. ನಷ್ಟ

ಕಾರ್ಕಳ : ಹಿಟಾಚಿ ಯಂತ್ರವನ್ನು ಕಿಡಿಗೇಡಿಗಳು ಸುಟ್ಟು ನಾಶ ಮಾಡಿರುವ ಘಟನೆ ಕಲ್ಯಾದಲ್ಲಿ ಸಂಭವಿಸಿದೆ. ಜಾರ್ಕಳ ಕುಕ್ಕುಂದೂರು ಸಾನಿಧ್ಯ ನಿವಾಸದ ದಿನೇಶ್‌ ಶೆಟ್ಟಿ (47) ಎಂಬವರು ಕಲ್ಯಾದಲ್ಲಿರುವ ತನ್ನ ಪಟ್ಟಾ ಜಾಗದಲ್ಲಿ ಕ್ರಶರ್‌ ಮಾಡುವ ಉದ್ದೇಶದಿಂದ ಸ್ಥಳ ಸಮತಟ್ಟು ಮಾಡಲು ಗುರುವಾರ ಬೆಳಗ್ಗೆ ತನ್ನ ಮಾಲಕತ್ವದ ಹಿಟಾಚಿ ತಂದು ನಿಲ್ಲಿಸಿದ್ದರು. ಶುಕ್ರವಾರ ಬೆಳಗ್ಗೆ ಬಂದು ನೋಡಿದಾಗ ಕಿಡಿಗೇಡಿಗಳು ಹಿಟಾಚಿಗೆ ಬೆಂಕಿ ಹಚ್ಚಿದ್ದರು. ಹಿಟಾಚಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸುಮಾರ 15 ಲ.ರೂ. ನಷ್ಟ ಸಂಭವಿಸಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.





























































































































error: Content is protected !!
Scroll to Top