ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಕಾರ್ಕಳದ 2, 640 ವಿದ್ಯಾರ್ಥಿಗಳು ನೋಂದಣಿ

ವರದಿ : ನಳಿನಿ ಎಸ್.‌ ಸುವರ್ಣ

ಕಾರ್ಕಳ : ರಾಜ್ಯಾದ್ಯಂತ ನಾಳೆಯಿಂದ (ಮಾ. 31) ಏಪ್ರಿಲ್ 15ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದ್ದು, ಕಾರ್ಕಳ-ಹೆಬ್ರಿ ತಾಲೂಕಿನ 27 ಸರಕಾರಿ ಪ್ರೌಢಶಾಲೆಗಳು, 12 ಅನುದಾನಿತ, 15 ಅನುದಾನ ರಹಿತ, 1 ಮೊರಾರ್ಜಿ ದೇಸಾಯಿ ಹಾಗೂ 1 ಮೌಲಾನ ಅಜ಼ಾದ್‌ ಸೇರಿದಂತೆ 56 ಪ್ರೌಢಶಾಲೆಗಳ ಒಟ್ಟು 2,640 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

2, 640 ವಿದ್ಯಾರ್ಥಿಗಳಲ್ಲಿ 1, 353 ವಿದ್ಯಾರ್ಥಿ ಹಾಗೂ 1287 ವಿದ್ಯಾರ್ಥಿನಿಯರಿದ್ದಾರೆ. ಇವರಲ್ಲಿ 2, 549 ವಿದ್ಯಾರ್ಥಿಗಳು ಮೊದಲ ಬಾರಿ ಪರೀಕ್ಷೆ ಬರೆಯುವ (ಫ್ರೆಶರ್ಸ್) ರಾಗಿದ್ದು, 44 ವಿದ್ಯಾರ್ಥಿಗಳು ಪುನರಾವರ್ತಿತರಾಗಿದ್ದಾರೆ. 39 ವಿದ್ಯಾರ್ಥಿಗಳು ಖಾಸಗಿ ಪರೀಕ್ಷೆ ಬರೆಯುವವರಿದ್ದು, 08 ಮಂದಿ ಖಾಸಗಿ ಪುನರಾವರ್ತಿತರಿದ್ದಾರೆ. ‌

10 ಪರೀಕ್ಷಾ ಕೇಂದ್ರಗಳು
ಸ.ಪ.ಪೂ.ಕಾ. ಕಾರ್ಕಳ – 242 ವಿದ್ಯಾರ್ಥಿಗಳು, ಎಸ್‌ವಿಟಿ ಬಾಲಿಕಾ ಪ.ಪೂ.ಕಾ. ಕಾರ್ಕಳ – 276 ವಿದ್ಯಾರ್ಥಿಗಳು, ಶ್ರೀಮದ್‌ ಭುವನೇಂದ್ರ ಫ್ರೌಢಶಾಲೆ – 198 ವಿದ್ಯಾರ್ಥಿಗಳು, ಸುಂದರ ಪುರಾಣಿಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ – 198 ವಿದ್ಯಾರ್ಥಿಗಳು, ಸ.ಪ.ಪೂ.ಕಾ. ಹೆಬ್ರಿ – 386 ವಿದ್ಯಾರ್ಥಿಗಳು, ಸ.ಪ.ಪೂ.ಕಾ. ಬೈಲೂರು – 335 ವಿದ್ಯಾರ್ಥಿಗಳು, ಡಾ. ಎನ್‌.ಎಸ್‌.ಎ.ಎಂ.ಪ.ಪೂ. ಕಾಲೇಜು ನಿಟ್ಟೆ – 137 ವಿದ್ಯಾರ್ಥಿಗಳು, ಸ.ಪ.ಪೂ.ಕಾಲೇಜು ಬಜಗೋಳಿ – 294 ವಿದ್ಯಾರ್ಥಿಗಳು, ಸ.ಪ.ಪೂ.ಕಾಲೇಜು ಬೆಳ್ಮಣ್‌ – 248 ವಿದ್ಯಾರ್ಥಿಗಳು, ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಮುನಿಯಾಲು – 279 ವಿದ್ಯಾರ್ಥಿಗಳು ಸೇರಿದಂತೆ ಉಭಯ ತಾಲೂಕಿನಾದ್ಯಂತ 7 ಕ್ಲಸ್ಟರ್‌ಗಳನ್ನೊಳಗೊಂಡಂತೆ ಒಟ್ಟು 10 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಬರೆಯುವ ಪ್ರತಿ ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿದ್ದು ಓರ್ವ ಕೊಠಡಿ ಮೇಲ್ವಿಚಾರಕರಿರುತ್ತಾರೆ.

ಪೂರ್ವಸಿದ್ಧತೆ
ಈ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಇಲಾಖಾ ಅಧಿಕಾರಿಗಳಿಂದ ಸಿಸಿ ಕ್ಯಾಮರಾ ಅಳವಡಿಕೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ಪರೀಶೀಲನೆ ನಡೆಸಲಾಗಿದೆ. ಇನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಸೂಚನೆಯಂತೆ ತಾಲೂಕಿನ ಎಲ್ಲ ಶಾಲೆಗಳಲ್ಲಿ ಅಂತಿಮ ಪರೀಕ್ಷೆಗೆ ಬೇಕಾದ ಸಿದ್ಧತೆಗಳನ್ನು ಕಳೆದ ಒಂದು ವರ್ಷದಿಂದ ನಡೆಸಲಾಗಿದೆ. ವಿದ್ಯಾರ್ಥಿಗಳಲ್ಲಿ ಕಲಿಯುವ ಸಾಮರ್ಥ್ಯ ಹೆಚ್ಚಿಸಲು ಮತ್ತು ಪರೀಕ್ಷಾ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಇಲಾಖೆಯ ಆದೇಶದಂತೆ ಪ್ರೇರಣಾ ಶಿಬಿರ, ಮನೆ ಮನೆ ಭೇಟಿ ನೀಡಿ ಕಲಿಯುವ ವಾತಾವರಣ ಪರಿಶೀಲನೆ, ಶಾಲೆಯಲ್ಲಿ ವಿಷಯವಾರು ಗುಂಪು – ವಿಶೇಷ ಬೋಧನೆ ಸೇರಿದಂತೆ ಹಲವಾರು ಕ್ರಮಗಳನ್ನು ಕಾರ್ಕಳ ತಾಲೂಕಿನಾದ್ಯಂತ ಮಾಡಲಾಗಿದೆ.

ಉತ್ತಮ ಫಲಿತಾಂಶದ ನಿರೀಕ್ಷೆ
ಇಲಾಖೆಯ ಆದೇಶದಂತೆ ಎಲ್ಲಾ ಶಾಲೆಗಳಲ್ಲಿ ಉತ್ತಮ ರೀತಿಯಲಿ ಪರೀಕ್ಷಾ ಪೂರ್ವಸಿದ್ಧತೆಗಳನ್ನು ನಡೆಸಲಾಗಿದೆ. ಕಳೆದ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕು 91% ಅಂಕ ಪಡೆಯುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿತ್ತು. ಈ ಬಾರಿ ಅದಕ್ಕಿಂತ ಉತ್ತಮ ಫಲಿತಾಂಶದ ನಿರೀಕ್ಷೆಯಲಿದ್ದೇವೆ.
ಚಂದ್ರಯ್ಯ ಜಿ.
ಕ್ಷೇತ್ರ ಶಿಕ್ಷಣಾಧಿಕಾರಿ

ಸಹಾಯವಾಣಿ
ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರಲ್ಲಿರುವ ಯಾವುದೇ ಸಂದೇಹ, ಗೊಂದಲ, ಆತಂಕ ಪರಿಹರಿಸಲು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಹಾಯವಾಣಿಯನ್ನು ಪ್ರಾರಂಭಿಸಿದ್ದು, ಎಸ್.ಎಸ್.ಎಲ್.ಸಿ. ಪರೀಕ್ಷೆ ಕುರಿತಾದ ಯಾವುದೇ ಗೊಂದಲ ಮಾಹಿತಿಗೆ 080 -23310075/76 ಸಂಪರ್ಕಿಸಬಹುದಾಗಿದೆ.

ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಅಂತಿಮ‌ ವೇಳಾಪಟ್ಟಿ ಇಂತಿದೆ
ಮಾ. 31 -ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್, ಸಂಸ್ಕೃತ
ಏ. 3 -ಗಣಿತ ಹಾಗೂ ಸಮಾಜ ಶಾಸ್ತ್ರ
ಏ. 6 -ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ಕನ್ನಡ
ಏ. 8 -ಅರ್ಥಶಾಸ್ತ್ರ, ಏಪ್ರಿಲ್‌ 10-ವಿಜ್ಞಾನ, ರಾಜ್ಯಶಾಸ್ತ್ರ
ಏ. 12 -ತೃತೀಯ ಭಾಷೆ ಇಂಗ್ಲಿಷ್, ಹಿಂದಿ, ಕನ್ನಡ, ಸಂಸ್ಕೃತ
ಏ. 15 – ಸಮಾಜ ವಿಜ್ಞಾನ ಪರೀಕ್ಷೆ





























































































































error: Content is protected !!
Scroll to Top