Thursday, December 1, 2022
spot_img
Homeಸುದ್ದಿಜ್ಞಾನಸುಧಾ : ಪ್ರತಿಭಾ ಪುರಸ್ಕಾರ - 66.67 ಲಕ್ಷ ರೂ. ದ್ವಿತೀಯ ಹಂತದ ಸ್ಕಾಲರ್‌ಶಿಪ್‌ ವಿತರಣೆ

ಜ್ಞಾನಸುಧಾ : ಪ್ರತಿಭಾ ಪುರಸ್ಕಾರ – 66.67 ಲಕ್ಷ ರೂ. ದ್ವಿತೀಯ ಹಂತದ ಸ್ಕಾಲರ್‌ಶಿಪ್‌ ವಿತರಣೆ

ಜ್ಞಾನಸುಧಾ ಕಾರ್ಕಳಕ್ಕೊಂದು ಹೆಮ್ಮೆಯ ಸಂಸ್ಥೆ – ನಿತ್ಯಾನಂದ ಪ್ರಭು

ಕಾರ್ಕಳ : ಕಾರ್ಕಳ ಕಲ್ಲಿನಿಂದ ಕೆತ್ತಿದ ಮೂರ್ತಿಗಳು ದೇಶ-ವಿದೇಶಗಳಲ್ಲಿ ಆರಾಧನೆಗೊಳ್ಳುತ್ತಿದೆ. ಅಂತೆಯೇ ಜ್ಞಾನಸುಧಾ ವಿದ್ಯಾಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ, ಮೌಲ್ಯಗಳೊಂದಿಗೆ ದೇಶ ವಿದೇಶಗಳಲ್ಲಿ ಉತ್ತಮ ಹೆಸರು ಸಂಪಾದಿಸಿದ್ದಾರೆ. ಇದು ಕಾರ್ಕಳಕ್ಕೆ ಮತ್ತೊಂದು ಹೆಮ್ಮೆಯ ಸಂಗತಿ ಎಂದು ಖ್ಯಾತ ಲೆಕ್ಕಪರಿಶೋಧಕ ನಿತ್ಯಾನಂದ ಪ್ರಭು ಬಣ್ಣಿಸಿದರು.
ಅವರು ಗುರುವಾರ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ ವತಿಯಿಂದ ನಡೆದ ದ್ವಿತೀಯ ಹಂತದ ಜ್ಞಾನಸುಧಾ ಪ್ರತಿಭಾ ಪುರಸ್ಕಾರ-2022ರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವ ವಿದ್ಯಾರ್ಥಿ ತಂದೆ-ತಾಯಿಯನ್ನು ಗೌರವಿಸುತ್ತಾರೋ ಅವರು ಸಮಾಜದ ಉನ್ನತ ಸ್ಥಾನಕ್ಕೆ ಏರುತ್ತಾರೆ. ಸಮಾಜ ಅವರನ್ನು ಗೌರವಿಸುತ್ತದೆ. ಅಂತಹ ಮಕ್ಕಳನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆ ನೀಡುತ್ತಿರುವುದು ಖುಷಿಯ ಸಂಗತಿ ಎಂದು ನಿತ್ಯಾನಂದ ಪ್ರಭು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟಿ ಗಣಪತಿ ಪೈ, ಸಂಸ್ಥೆಯ ಅಧ್ಯಕ್ಷರು ಶಾಲಾ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ದೊಡ್ಡ ಮೊತ್ತದ ಸ್ಕಾಲರ್‌ ಶಿಪ್‌ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಬೇಕೆಂದರು.

ಸನ್ಮಾನ
ರಾಷ್ಟ್ರಮಟ್ಟದ ತ್ರೋಬಾಲ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ಸಂಸ್ಥೆಯ ವಿದ್ಯಾರ್ಥಿನಿ ಕು. ಸ್ವಾತಿ ಶೆಟ್ಟಿ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಗೊಂಡ ಜ್ಞಾನಸುಧಾದ 22 ವಿದ್ಯಾರ್ಥಿಗಳನ್ನು, ಪ್ರಸ್ತುತ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿದ್ದು ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದೊಂದಿಗೆ ಗೌರವಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ – ರಾಷ್ಟ್ರಮಟ್ಟಕ್ಕೆ ಬೆಳಗುವಲ್ಲಿ ಶ್ರಮಿಸಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸೌಜನ್ಯ ಹೆಗ್ಡೆ, ಅರುಣ್ ಕುಮಾರ್, ಕಿರಣ್ ಕುಮಾರ್‌ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟ್ರಸ್ಟಿ ಅನಿಲ್ ಕುಮಾರ್ ಜೈನ್, ಜ್ಞಾನಸುಧಾ ತ್ರಿವಳಿ ಸಂಸ್ಥೆಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಸಂಸ್ಥೆಯ ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ ಸ್ವಾಗತಿಸಿ, ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!