ಬಿಜಾಪುರದ ಸೈನಿಕ್ ಶಾಲೆಯಲ್ಲಿ ಹೆಣ್ಮಕ್ಕಳಿಗೂ ಪ್ರವೇಶ : ಭೌತಿಕ ತರಗತಿಗಳು ಆರಂಭ

ವಿಜಯಪುರ : ಬಿಜಾಪುರ ಸೈನಿಕ ಶಾಲೆ ಪ್ರಸಕ್ತ ವರ್ಷದಿಂದ ದೈನಂದಿನ ತರಗತಿಗಳಿಗೆ ಬಾಲಕಿಯರಿಗೆ ಪ್ರವೇಶಕ್ಕೆ ಅವಕಾಶ ನೀಡಿದೆ. 1963 ರಿಂದ ಇದೇ ಮೊಟ್ಟ ಮೊದಲ ಬಾರಿಗೆ ಮಹಿಳಾ ಪ್ರಾಂಶುಪಾಲರು ನೇಮಕವಾಗಿದ್ದಾರೆ. 2020-21ನೇ ಸಾಲಿಗೆ ಬಾಲಕಿಯರಿಗೂ ಪ್ರವೇಶಾತಿ ನೀಡಿದ್ದು ಕೋವಿಡ್ ಕಾರಣದಿಂದ ಶಾಲೆಯಲ್ಲಿ ಇದುವರೆಗೂ ಆನ್ ಲೈನ್ ತರಗತಿ ನಡೆಯುತ್ತಿತ್ತು. ಆದರೆ ಮೊದಲ ಬಾರಿಗೆ ಭೌತಿಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಪ್ರಸ್ತುತ 7 ಮತ್ತು 8ನೇ ತರಗತಿಯಲ್ಲಿ 18 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಇನ್ನೂ 8-10 ವಿದ್ಯಾರ್ಥಿನಿಯರು ಹಾಜರಾಗಲಿದ್ದಾರೆ. 6ನೇ ತರಗತಿಯ ಒಟ್ಟು ಪ್ರವೇಶಗಳಲ್ಲಿ ಶೇಕಡಾ ಹತ್ತರಷ್ಟು ಬಾಲಕಿಯರಿಗೆ ವಾರ್ಷಿಕವಾಗಿ ಮೀಸಲಿಟ್ಟು ಅವರು ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ತ್ ಅವರು ಮೇ 2 ರಂದು ಪ್ರಿನ್ಸಿಪಾಲ್ ಕಮಾಂಡರ್ ಸುರುಚಿ ಗೌರ್ ಅವರಿಂದ ಶಾಲೆಯ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡರು. ಅವರು ಈ ಹಿಂದೆ ಉಪ ಕಮಾಂಡ್ ಶಿಕ್ಷಣ ಅಧಿಕಾರಿಯಾಗಿ, ಶಿಕ್ಷಣ ನಿರ್ದೇಶನಾಲಯದಲ್ಲಿ ಜಂಟಿ ನಿರ್ದೇಶಕರಾಗಿ, ಏರ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ಜಂಟಿ ನಿರ್ದೇಶಕರಾಗಿ ಮತ್ತು ಹೆಡ್‌ಕ್ವಾರ್ಟರ್ಸ್ ಟ್ರೈನಿಂಗ್ ಕಮಾಂಡ್‌ನಲ್ಲಿ ಆಡಳಿತ ತರಬೇತಿ ಕಛೇರಿಯಲ್ಲಿ ಸೇವೆಸಲ್ಲಿಸಿರುತ್ತಾರೆ.

































































































error: Content is protected !!
Scroll to Top