ಕಾರ್ಕಳದಲ್ಲಿ ಪ್ರಥಮ ಬಾರಿಗೆ ಲೇಡೀಸ್ ಫಿಟ್ನೆಸ್ ಹೌಸ್ ಶುಭಾರಂಭ

ಕಾರ್ಕಳ : ಜೋಡುರಸ್ತೆ ಶ್ರೀದುರ್ಗಾಕೃಪಾ ಕೆನರಾ ಬ್ಯಾಂಕ್‌ ಕಟ್ಟಡದಲ್ಲಿ ಮೇ 8ರಂದು ಲೇಡೀಸ್ ಫಿಟ್ನೆಸ್ ಶುಭಾರಂಭಗೊಂಡಿತು. ಕುಕ್ಕುಂದೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಕೆ. ರಾಜೇಂದ್ರ ಪ್ರಸಾದ್ ಉದ್ಘಾಟಿಸಿ, ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಂತರಾಷ್ಟ್ರೀಯ ಕ್ರೀಡಾಪಟು ಅಪ್ಸರಾ ಆರ್.‌ ಕಟೀಲ್‌ ಮಾತನಾಡಿ, ಆರೋಗ್ಯದ ರಕ್ಷಣೆಗೆ ಫಿಟ್ನೆಸ್‌ ಅಗತ್ಯ. ಮಹಿಳೆಯರಿಗಾಗಿಯೇ ಜೋಡುರಸ್ತೆಯಲ್ಲಿ ಫಿಟ್ನೆಶ್‌ ಕೇಂದ್ರ ಸ್ಥಾಪಿಸಿರುವುದು ಕಾರ್ಕಳದ ಜನತೆಗೆ ಸಂತಸದ ವಿಚಾರವೆಂದರು. ಕ್ರೈಸ್ಟ್ ಕಿಂಗ್ ಚರ್ಚ್‌ನ ಧರ್ಮಗುರು ರೆ.ಫಾ. ವಿಜಿತ್ ಮಥಾಯಿಸ್, ಬಂಗ್ಲೆಗುಡ್ಡೆ ತವೈಬ್ ಗಾರ್ಡನ್ ಪ್ರಾಂಶುಪಾಲ ಉಸ್ತಾದ್ ಮಹಮ್ಮದ್ ಶರೀಫ್ ಶಹಾದ್, ಜೇಸಿಸ್‌ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ವಂದನಾ ರೈ, ಕಟ್ಟಡ ಮಾಲಕ ರಾಘವೇಂದ್ರ ನಾಯಕ ಉಪಸ್ಥಿತರಿದ್ದರು. ಜಿಮ್‌ ಪಾಲುದಾರರಾದ ಯೋಗೀಶ್‌ ಸಾಲಿಯಾನ್‌ ಹಾಗೂ ಮಹಮ್ಮದ ಆಲಿ ಎಲ್ಲರ ಸಹಕಾರ ಕೋರಿದರು. ಜ್ಯೋತಿ ರಮೇಶ್ ಕಾರ್ಯಕ್ರಮ ನಿರ್ವಹಿಸಿದರು.





























































































































error: Content is protected !!
Scroll to Top