ಉಡುಪಿ : ಕೇಂದ್ರ ಸರಕಾರದಿಂದ ಬರುತ್ತಿರುವ ಕಲ್ಲಿದ್ದಲ್ಲಿನಲ್ಲಿ ವಿದ್ಯುತ್ ಉತ್ಪಾದನೆಯ ನಿರ್ವಹಣೆ ಮಾಡಲಾಗುತ್ತಿದ್ದು, ಕಲ್ಲಿದ್ದಲ್ಲು ಕೊರತೆಯಾಗದಂತೆ ಎಚ್ಚರವಹಿಸಿದ್ದೇವೆ. ವಿದ್ಯುತ್ ಉತ್ಪಾದನೆ ಎಲ್ಲಿಯೂ ಸ್ಥಗಿತವಾಗಿಲ್ಲ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಮೇ. 2ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿ ಎಪ್ರಿಲ್‌ನಲ್ಲಿ ಮಳೆಯಾಗಿರುವುದರಿಂದ ವಿದ್ಯುತ್ ಉತ್ಪಾದನೆಯಲ್ಲಿ ಅಂತಹ ತೊಡಕುಗಳೇನು ಉಂಟಾಗಿಲ್ಲ. ವಿದ್ಯುತ್ ಉತ್ಪಾದನೆಯಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ 2 ದಿನಗಳಿಗೊಮ್ಮೆ ಸಿಎಂ ಮಾರ್ಗದರ್ಶನದಲ್ಲಿ ಸಭೆ ನಡೆಸಲಾಗುತ್ತಿದೆ ಎಂದರು.
ರಾಜ್ಯಾದ್ಯಂತ ಮೇ. 5ರಿಂದ 15ರ ವರೆಗೆ ಎಲ್ಲಾ ಟ್ರಾನ್ಸ್ ಫಾರ್ಮರ್(ಟಿಸಿ)ಗಳ ನಿರ್ವಹಣಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕುರಿತು ಎಲ್ಲಾ ನಿಗಮಗಳಿಗೆ ಸೂಚನೆ ಹೊರಡಿಸಲಾಗಿದೆ. ಕೆಲವೆಡೆ ತಾಂತ್ರಿಕ ದೋಷಗಳಿಂದ ಟಿಸಿ ಸ್ಪೋಟಗೊಂಡು ಪ್ರಾಣಹಾನಿ ಸಂಭವಿಸಿದ್ದು, ಇನ್ನು ಕೆಲವು ದಿನಗಳಲ್ಲಿ ಮಳೆಗಾಲ ಆರಂಭವಾಗುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.
ವಿದ್ಯುತ್ ಉತ್ಪಾದನೆ ಸ್ಥಗಿತವಾಗಿಲ್ಲ : ಸುನಿಲ್ ಕುಮಾರ್







































































