ಕಾರ್ಕಳ : ಮಕ್ಕಳಿಗೆ ಎಳವೆಯಲ್ಲೇ ಕ್ರೀಡೆ ಕುರಿತು ಆಸಕ್ತಿ ಮೂಡಿಸುವ, ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು. ಮಯೂರ ಯೂತ್ ಕ್ಲಬ್ ಈ ನಿಟ್ಟಿನಲ್ಲಿ ಉಚಿತವಾಗಿ ಶಿಬಿರ ಆಯೋಜಿಸುವ ಕಾರ್ಯ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಪ್ರೊ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ಎ. 1ರಂದು ಸ್ವರಾಜ್ ಮೈದಾನದಲ್ಲಿ ಮಯೂರ ಯೂತ್ ಕ್ಲಬ್ ವತಿಯಿಂದ ನಡೆದ ಕ್ರೀಡಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಯೂರ ಯೂತ್ ಕ್ಲಬ್‌ನ ಅಧ್ಯಕ್ಷ ವಿಜಯ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರ ಸುರೇಂದ್ರ ಶೆಟ್ಟಿ, ಮೋಹನ್ ಕೆ., ಶ್ರೀಕಾಂತ್ ಭಟ್, ಪುರಸಭಾ ಸದಸ್ಯ ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಸನ್ಮಾನ
30 ಕ್ರೀಡಾಪಟುಗಳನ್ನು ಮಯೂರ ಯೂತ್ ಕ್ಲಬ್ ಸಮವಸ್ತ್ರ ನೀಡಿ ಗೌರವಿಸಲಾಯಿತು. ಸುಬ್ರಮಣ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ಅಜ್ರಿ ವಂದಿಸಿದರು. ಎ. 22ರಿಂದ ಮೇ. 1ರವರೆಗೆ ಅಥ್ಲೆಟಿಕ್ಸ್, ವಾಲಿಬಾಲ್, ಕಬಡ್ಡಿ, ಖೋ-ಖೋ ತರಬೇತಿ ನೀಡಿದ್ದು, ಶಿಬಿರದಲ್ಲಿ 130 ವಿದ್ಯಾರ್ಥಿಗಳು ಭಾಗವಹಿಸಿದ್ದರು.






































































