ಮುದ್ರಾಡಿ : ಕೋವಿಡ್‌ ಪಾಸಿಟಿವ್‌ ಮನೆಗೆ ಡಿಸಿ ಭೇಟಿ

ಕೊರೊನಾ ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಪರಿಣಾಮಕಾರಿ ಕಾರ್ಯ-ಡಿಸಿ

ಹೆಬ್ರಿ : ಹೆಬ್ರಿ ಸೇರಿದಂತೆ ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿ ಕಂಡು ಬಂದಿದೆ. ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ ಹೆಚ್ಚಿನ ಆದ್ಯತೆ ನೀಡಿ ‍ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಅವರು ಗುರುವಾರ ಹೆಬ್ರಿ ತಾಲ್ಲೂಕಿನ ವಿವಿದೆಡೆ ಭೇಟಿ ಮಾಡಿದರು.
ಹೆಬ್ರಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ವೈದ್ಯಕೀಯ ಮುಖ್ಯಸ್ಥರೊಂದಿಗೆ ಮಾತನಾಡಿ, ಆಮ್ಲಜನಕ ಯಾರಿಗೆ ಅಗತ್ಯವಿಲ್ಲವೋ ಅವರಿಗೆ ಇಲ್ಲೇ ಚಿಕಿತ್ಸೆ ಕೊಡಿ. ಯಾರಿಗೆ ಆಮ್ಲಜನಕದ ಅಗತ್ಯವಿದೆ ಅವರನ್ನು ಉಡುಪಿ ಅಥವಾ ಕಾರ್ಕಳಕ್ಕೆ ಕಳುಹಿಸುವಂತೆ ತಿಳಿಸಿದರು. ಹೆಬ್ರಿಯಲ್ಲಿ ವೈದ್ಯರು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಬ್ರಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಭೇಟಿ ನೀಡಿ ಹೆಬ್ರಿ ತಹಶೀಲ್ದಾರ್ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿ ಜೊತೆಗೆ ಮಾತನಾಡಿದ್ದೇನೆ. ನಮ್ಮ ಉದ್ದೇಶ ಹೆಬ್ರಿ ಕೊರೊನಾ ಮುಕ್ತ ಆಗಬೇಕೆಂಬುದು ಎಂದರು.
ಹೆಬ್ರಿ ತಹಶೀಲ್ದಾರ್ ಪುರಂದರ್ ಕೆ. ಹೆಬ್ರಿ ಸಬ್‌ ಇನ್ಸ್‌ಪೆಕ್ಟರ್‌ ಮಹೇಶ್ ಟಿ.ಎಂ., ಹೆಬ್ರಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ. ಸಂತೋಷ್‌ ಕುಮಾರ್‌, ಕಂದಾಯ ನಿರೀಕ್ಷಕ ಹಿತೇಶ್‌ ಯು.ಬಿ., ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹೆಬ್ರಿ ತಾಲ್ಲೂಕಿನ ಮುದ್ರಾಡಿಯಲ್ಲಿ ಕೊರೊನಾ ಪಾಸಿಟಿವ್‌ ಬಂದ ಮನೆಗೆ ಡಿಸಿ ಜಗದೀಶ್‌ ಭೇಟಿ ನೀಡಿ ಧೈರ್ಯ ತುಂಬಿ, ಮನೆಯಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಯಾವುದೇ ಗೊಂದಲಕ್ಕೆ ಒಳಗಾಗದೇ ತೊಂದರೆ ಕಂಡು ಬಂದರೆ ತಕ್ಷಣ ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ ಸಂಪರ್ಕಿಸುವಂತೆ ತಿಳಿಸಿದರು. ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ, ಅಭಿವೃದ್ಧಿ ಅಧಿಕಾರಿ ಎಡ್ಮಡ್ಕ ಸದಾಶಿವ ಸೇರ್ವೆಗಾರ್‌, ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ಗಣಪತಿ ಮುದ್ರಾಡಿ, ಗ್ರಾಮ ಲೆಕ್ಕಿಗ ನವೀನ್‌ ಮತ್ತಿತರರ ಅಧಿಕಾರಿಗಳಿದ್ದರು.





























































































































error: Content is protected !!
Scroll to Top