ಕಾರ್ಕಳ : ಶಿರ್ಲಾಲು ಗ್ರಾಮದ ಹಾಡಿಯಂಗಡಿ ಎಂಬಲ್ಲಿ ವ್ಯಕ್ತಿಯೋರ್ವರನ್ನು ಕೊಲೆಗೈದ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಆನಂದ ಶೆರ್ವೆಗಾರ (63) ಎಂಬವರನ್ನು ತಲೆಗೆ ದೊಣ್ಣೆಯಿಂದ ಹೊಡೆದು ಸಾಯಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪತ್ನಿಯ ಅಕ್ಕನ ಮಗ ಕೆರ್ವಾಶೆಯ ಹರೀಶ ಎಂಬಾತನನ್ನು ಅಜೆಕಾರು ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ.
ಪತ್ನಿ ಮಕ್ಕಳಿಂದ ಪತ್ಯೇಕವಾಗಿದ್ದರು
ಆನಂದ ಅವರು ಪತ್ನಿ, ಮಕ್ಕಳಿಂದ ಪತ್ಯೇಕವಾಗಿ ವಾಸವಾಗಿದ್ದರು. ತನ್ನಲ್ಲಿದ್ದ 4 ಎಕ್ರೆ ಜಾಗವನ್ನು ಆನಂದ ಅವರು ಜನವರಿಯಲ್ಲಿ ಮಾರಾಟ ಮಾಡಿದ್ದು, ಬಳಿಕ ಪತ್ನಿಯ ಅಕ್ಕನ ಮಗ ಹರೀಶ್ ಎಂಬಾತನೊಂದಿಗೆ ವಾಸವಾಗಿದ್ದು, ಜೊತೆಗೆ ಕೆಲಸಕ್ಕೆ ಹೋಗುತ್ತಿದ್ದರು. ಪತ್ನಿ ಹಾಗೂ ಮಕ್ಕಳು ಶಿರ್ಲಾಲುವಿನ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಘಟನೆ ನಡೆದ ತಕ್ಷಣ ಹರೀಶ್ ಸ್ಥಳೀಯರಲ್ಲಿ ಆನಂದ ಅವರಿಗೆ ಬಿದ್ದು ಏಟಾಗಿದೆ ಎಂದು ತಿಳಿಸಿರುತ್ತಾನೆ.






























































