Tuesday, July 5, 2022
spot_img
Homeಯುವ ವೇದಿಕೆಬದಲಾದ ಬದುಕಿನ ಭಾವ…

ಬದಲಾದ ಬದುಕಿನ ಭಾವ…

ಪರೀಕ್ಷೆಗೆ ಈಗಲೇ ತಯಾರಿ ಮಾಡಿಕೊಳ್ಳಬೇಕು,ಈ ಬಾರಿ ಕಾಲೇಜಿಗೆ ಫಸ್ಟ್ ಬಂದು ಒಂದೊಳ್ಳೆ ಕೆಲ್ಸಕ್ಕೆ ಟ್ರೈ ಮಾಡ್ಬೇಕು. ಇನ್ಮೇಲಾದ್ರು ಮನೆ ಜವಾಬ್ದಾರಿನ ಹೊತ್ಕೊಂಡು ಅಪ್ಪನ ಮೇಲಿನ ಹೊಣೆ ಕಡಿಮೆ ಮಾಡಿ ಅಕ್ಕನಿಗೊಂದು ಮದುವೆ ಮಾಡ್ಬೇಕು.ಇನ್ನೇನಿದ್ರು ಒಂದು ವಾರದಲ್ಲಿ ಎಲ್ಲಾನು ಬದಲಾಗುತ್ತೆ ಅನ್ನೊ ಹುಮ್ಮಸ್ಸು ಅವನಿಗೆ.
ಇನ್ನೆರಡು ದಿನದಲ್ಲಿ ವಿದೇಶಕ್ಕೆ ಹೊರಡೊ ಸಿದ್ದತೆಯಲ್ಲಿ ಇನ್ನೊಬ್ಬ.ಮನೆ ಕಷ್ಟ ಎಲ್ಲ ಇಲ್ಲಿಗೆ ಮುಗಿಯಿತು ಅನ್ನೊ ಖುಷಿ ಅವನಲ್ಲಿ.ಇನ್ನು ಸ್ವಲ್ಪ ದಿನದಲ್ಲಿ ಮಕ್ಕಳು ಮೊಮ್ಮಕ್ಕಳು ಮನೆಗೆ ಬರ್ತಾರೆ. ಅವರಿಗೆ ದಿನಕ್ಕೊಂದು ತಿಂಡಿ ಮಾಡಿ ಬಡಿಸಬೇಕು ಎಂದು ಈಗಲೇ ತಯಾರಿಯಲ್ಲಿ ತೊಡಗಿರುವ ಅಜ್ಜಿ. ಮೊಮ್ಮಕಳಿಗಾಗಿ ಕಾಯುತ್ತಾ ಇದ್ದಾಳೆ.
ಮಗಳ ಮದುವೆಗೆ ಇರುವುದು ಇನ್ನೆರಡು ತಿಂಗಳು. ಅವಳಿಗಂಥ ಮಾಡಿಟ್ಟದ್ದು ಏನಿಲ್ಲ.ಇನ್ನೂ ಮದುವೆಗೆ ಹಣ ಹೊಂದಿಸಿಯೆ ಅಗಿಲ್ಲ. ಕಷ್ಟಪಟ್ಟಾದರು ಮದುವೆ ಅದ್ದೂರಿಯಾಗಿ ಮಾಡಬೇಕು ಅಂತ ಮಗಳ ಮದುವೆಯ ಕನಸ್ಸನ್ನು ಹೊತ್ತುಕೊಂಡಿರುವ ಅಪ್ಪ.
ಹೋಗಿ ಅದೆಷ್ಟೊ ವರುಷಗಳಾಯ್ತು ಇನ್ನೂ ಮಕ್ಕಳಿಗೆ ನಮ್ಮ ನೆನಪೇ ಆಗಲಿಲ್ಲವಲ್ರಿ ಅಂತಾ ಸದಾ ಮಕ್ಕಳ ಚಿಂತೆಯಲ್ಲಿರುವ ಅಮ್ಮ.
ಹೇಗೋ ಜೀವನ ಸಾಗ್ತಾ ಇದೆ, ಇದೇ ರೀತಿ ಒಂದಷ್ಟು ಲಾಭ ಬಂದ್ರೆ ಮನೆ ಕಟ್ಟಿಸಿಬಿಡಬಹುದು ಅಂಥ ಲಾಭದ ನಿರೀಕ್ಷೆಯಲ್ಲಿ ಬೆಳೆ ಬೆಳೆದಿರುವ ರೈತ.
ಅಂತು ಜೀವನದಲ್ಲಿ ಸೆಟಲ್ ಆಗಿ ಆಯ್ತು, ಇನ್ಮುಂದೆ ಹಳ್ಳಿ ಕಡೆ ಮುಖ ಹಾಕೊ ಮಾತೆ ಇಲ್ಲ ಅನ್ಕೊಂಡಿರುವ ಮಗ.ಹಗಲು ರಾತ್ರಿಯೆನ್ನದೆ ದುಡಿಯುತಿರುವ ಅಪ್ಪನ ಜೊತೆ ಸ್ವಲ್ಪ ಸಮಯ ಕಳಿಬೇಕು ಅಂತ ಅಪ್ಪನಿಗಾಗಿ ಕಾಯ್ತ ಇರೊ ಮಕ್ಕಳು.
ಹೀಗೆ ಏನೇನೋ ಯೋಜನೆ,ಯೋಚನೆ,ಮುಂದಾಲೋಚನೆಯ ಜೊತೆ ಎಲ್ಲರೂ ಅವರವರ ದಾರಿಯನ್ನು ಹುಡುಕಿಕೊಂಡು ಸಾಗುತ್ತಿದ್ದರು.ಯಾರಿಗೂ ಅರಿವೇ ಇರಲ್ಲಿಲ್ಲ ಬದುಕು ಬದಲಾಗುತ್ತೆ, ಯೋಜನೆಯೆಲ್ಲ ತಲೆಕೆಳಗಾಗುತ್ತೆ ಅಂಥ.ಅದೊಂದು ದಿನ ಎಲ್ಲ ಬದಲಾಗಿ ಬಿಟ್ಟಿತ್ತು.ಅರಿವಿಲ್ಲದೆ ಮಹಾಮಾರಿ ಕಾಯಿಲೆಯೊಂದು ಲಗ್ಗೆ ಇಟ್ಟಿತು… ಬದುಕು ಕಟ್ಟಿಕೊಳ್ಳೊ ಕನಸನೆಲ್ಲ ನುಚ್ಚುನೂರು ಮಾಡಿತು.
ಒಂದು ವಾರದಲ್ಲಿ ಬರೋ ಪರೀಕ್ಷೆ ಬದುಕು ಬದಲಾಯಿಸಿ ಬಿಡುತ್ತೆ ಅಂತ ಅಂದುಕೊಂಡಿದ್ದ ಅವನ ಕನಸಿನರಮನೆಯ ಒಡೆದು, ವಿದೇಶಕ್ಕೆ ಹೊರಟು ನಿಂತಿದ್ದ ಅವನ ದಾರಿಯನ್ನೆ ಮುಚ್ಚಿ ಬಿಟ್ಟಿತ್ತು, ಎರಡು ತಿಂಗಳಲ್ಲಿ ಮದುವೆ ಮಾಡಬೇಕಂತ ಕಷ್ಟ ಪಟ್ಟು ದುಡಿಯುತ್ತಿದ್ದ ಅಪ್ಪನಿಗೆ ದುಡಿಮೆಯೇ ಇಲ್ಲದಂತಾಗಿಸಿ ಹೊತ್ತಿನ ಊಟಕ್ಕೆ ಪರದಾಡುವಂತೆ ಮಾಡಿ ಅಪ್ಪನ ಕನಸನೆಲ್ಲ ಕೊಂದೇ ಬಿಟ್ಟಿತ್ತು.
ಭೂಮಿ ತಾಯಿಯನ್ನೇ ನಂಬಿ ಎಲ್ಲಾ ಹಣವನ್ನು ಬೆಳೆಗೆ ಹಾಕಿ ಲಾಭ ಬಂದರೆ ಸಾಕು ಅಂತ ಕಾಯ್ತಾ ಇದ್ದ ರೈತನ ಕಣ್ಣಲ್ಲಿ ನೆತ್ತರು ಹರಿಸಿಬಿಟ್ಟಿತು.
ಇಷ್ಟೆಲ್ಲ ನೋವು ಕೊಟ್ಟರು ಮೊಮ್ಮಕ್ಕಳಿಗಾಗಿ ಕಾಯ್ತಿದ್ದ ಅಜ್ಜಿಯ ಮೊಗದಲ್ಲಿ ನಗುವ ತುಂಬಿಸಿತು ಅಂದುಕೊಂಡಂತೆ ಬಗೆ ಬಗೆಯ ಅಡುಗೆ ಮಾಡಿ ಬಡಿಸಿ ಸಂತೃಪ್ತಿ ಪಟ್ಟಿತು ಆ ಜೀವ.
ಮಕ್ಕಳನ್ನೊಮ್ಮೆ ನೋಡಬೇಕು ಅಂತ ಜೀವ ಕೈಯಲ್ಲಿ ಹಿಡಿದು ಕಾಯುತ್ತಿದ್ದ ಅಮ್ಮನ ಕೂಗು ಕೊನೆಗೂ ದೇವರಿಗೆ ತಲುಪಿತೊ ಏನೋ.ಊರ ದಾರಿಯನ್ನೆ ಮರೆತ್ತಿದ್ದ ಮಗ ಜೀವ ಉಳಿಸ ಬೇಕಾದರೆ ಊರಿಗೆ ಬರಲೇಬೇಕಾಯ್ತು.ಹೆತ್ತವರ ಪಾಲಿಗೆ ಮಕ್ಕಳು ಕಣ್ಣ ಮುಂದಿರಲು ಅದೇ ಮಹಾಮಾರಿ ವರವಾಯಿತು.
ಒಂದು ಬೆಳಗ್ಗೆ ಹೋದರೆ ಹೊತ್ತು ಕಳೆದರು ಮನೆಗೆ ಬಾರದೆ ದುಡಿಯುತ್ತಿದ್ದ ಅಪ್ಪನ ಸಮಯ ಈಗ ಮಕ್ಕಳಿಗೆ ಮೀಸಲಾಯಿತು.
ನೋವ ನೀಡಿತು ಎಂದು ಬೈಯಲೇ, ಅದೆಷ್ಟೋ ಜೀವ ಬಲಿಪಡೆಯಿತೆಂದು ಶಪಿಸಲೆ.ಅದೆಷ್ಟೊ ಜೀವಗಳಿಗೆ ಮರೆಯಾಗಿದ್ದ ನಗು ಖುಷಿಯ ತುಂಬಿತೆಂದು ಕೊಟ್ಟ ನೋವನೆಲ್ಲ ಮರೆತು ಬಿಡಲೇ… ಇನ್ನೂ ಅರಿವಾಗುತಲೇ ಇಲ್ಲ.ಅದೆಷ್ಟೋ ಜೀವಕ್ಕೆ ನೋವ ನೀಡಿ ಅಲ್ಲೊಂದು ಖುಷಿಯನ್ನಿಟ್ಟು ಅರಿಯದೆಯೇ ಬಂದು ಬದುಕ ಬದಲಾಯಿಸಿಯೇ ಬಿಟ್ಟಿತ್ತು.ಕಣ್ಣಿಗೆ ಕಾಣದಂತೆಯೇ ಅದೆಷ್ಟೋ ಜೀವಕ್ಕೆ ಕಣ್ಣೀರ ಹರಿಸಿ ಇನ್ನೊಂದಿಷ್ಟು ಜೀವದ ಕಣ್ಣೀರ ಒರೆಸಿಯಾಯಿತು.ಇನ್ನಾದರು ನಮ್ಮ ಜೀವನ ಮತ್ತೆ ನಮ್ಮದಾಗಲಿ ಅನ್ನೋ ಚಿಕ್ಕ ಆಸೆ.ಅರಿಯದೆಯೇ ಅದ ಬದಾಲಾವಣೆ ಇದಾಗಲೇ ಬದುಕ ಕಲಿಸಿಯಾಯಿತು.ಇನ್ನಾದರೂ ಬದಲಾದ ಹೊಸ ಜೀವನವ ಒಪ್ಪಿಕೊಂಡು ನಮ್ಮ ಸುಂದರವಾದ ಜೀವನಕ್ಕಾಗಿ ನಮ್ಮ ಜೀವವ ಕಾಪಾಡುವತ್ತ ನಮ್ಮದೊಂದು ಹೆಜ್ಜೆಯಿರಲಿ.
ಶ್ವೇತಾ ಎಸ್‌ .ದೇವಾಡಿಗ, ಕಾಂತಾವರ

ಶ್ವೇತಾ ಎಸ್‌ .ದೇವಾಡಿಗ, ಕಾಂತಾವರ


---

1 COMMENT

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!