ಸರ್ವೆ ಕಾರ್ಯ ಗ್ರಾಮ ಲೆಕ್ಕಾಧಿಕಾರಿಗಳು ನಡೆಸುವಂತಾಗಲಿ- ಎನ್.‌ ಹರೀಶ್ಚಂದ್ರ ಹೆಗ್ಡೆ ಅಭಿಪ್ರಾಯ

ಕಾರ್ಕಳ : ಕೃಷಿ ಜಮೀನಿನ 11ಇ ನಕ್ಷೆ ಅಥವಾ ಪ್ಲಾಟಿಂಗ್‍ನ್ನು ಮಾಡುವ ಸಂದರ್ಭ ಒಂದು ಸರ್ವೆ ನಂಬರ್‌ನಲ್ಲಿರುವ ಪ್ರತಿಯೊಂದು ಸಬ್‍ಡಿವಿಜನ್‍ಗೂ 1200 ರೂ. ಪಾವತಿಸಬೇಕಾಗಿದೆ. ಓರ್ವ ಕೃಷಿಕ 5 ಪಹಣಿ ಪತ್ರಿಕೆ ಹೊಂದಿದ್ದಲ್ಲಿ ಐವರು ಸರ್ವೇಯರ್‌ಳನ್ನು ಸಂಪರ್ಕಿಸಬೇಕಾಗಿದೆ. ಸರ್ವೆ ಕಾರ್ಯ ಸುಲಭಗೊಳಿಸುವ ನಿಟ್ಟಿನಲ್ಲಿ ಆಯಾಯ ಗ್ರಾಮ ಲೆಕ್ಕಾಧಿಕಾರಿ ಮತ್ತು ಇತರ ಕಂದಾಯ ಅಧಿಕಾರಿಗಳಿಗೆ ಇದರ ಜವಾಬ್ದಾರಿ ನೀಡಬೇಕೆಂದು ಕೃಷಿಕ ಎನ್‌. ಹರೀಶ್ಚಂದ್ರ ಹೆಗ್ಡೆ ಆಗ್ರಹಿಸಿದರು. ನ. 20ರಂದು ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಹರೀಶ್ಚಂದ್ರ ಹೆಗ್ಡೆ ಅವರು ಪ್ಲಾಟಿಂಗ್ ಮಾಡಲು ಅರ್ಜಿ ನೀಡಿದ ಸಂದರ್ಭದಲ್ಲಿ ಸಬ್‍ಡಿವಿಜನ್‍ನಲ್ಲಿ ಯಾರಿಗೆಲ್ಲಾ ಜಮೀನು ಮಂಜೂರಾಗಿರುತ್ತದೆ ಮತ್ತು ಅವರೆಲ್ಲರ ಜಮೀನನ್ನು 1, 2, 5 ಆಧಾರದಲ್ಲಿ ಪ್ಲಾಟಿಂಗ್‍ಗೆ ಒಳಪಡಿಸಲಾಗುತ್ತಿದೆ. ವರ್ಷಾನುಗಟ್ಟಲೆ ಸರ್ವೆ ಮಾಡದೇ ಕೃಷಿಕರನ್ನು ಸತಾಯಿಸುವುದು ದುರದೃಷ್ಟಕರ. ಸರ್ವೆಯರ್‌ ಜನಪ್ರತಿನಿಧಿಗಳು, ಮೇಲಾಧಿಕಾರಿಗಳ ಮಾತು ಕೇಳದೇ ಮನಬಂದಂತೆ ವರ್ತಿಸುತ್ತಿರುವುದರಿಂದ ಜಿಲ್ಲಾಧಿಕಾರಿಯವರು ಈ ಕುರಿತು ಗಮನ ಹರಿಸಬೇಕೆಂದು ಅವರು ಆಗ್ರಹಿಸಿದರು. ಪತ್ರಿಕಾಗೋಷ್ಟಿಯಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್‌ ಮಾಜಿ ಅಧ್ಹಕ್ಷ ರಾಜೇಶ್‌ ರಾವ್‌ ಉಪಸ್ಥಿತರಿದ್ದರು.





























































































































error: Content is protected !!
Scroll to Top