ಡಿವೈಎಸ್ಪಿ ದೌರ್ಜನ್ಯ ಪ್ರಕರಣ: ಪರಿಶೀಲಿಸಿ ಕ್ರಮ ವಹಿಸಲು ಅಪರ ಜಿಲ್ಲಾಧಿಕಾರಿ ಸೂಚನೆ

0

ಕಾರ್ಕಳ: ಕಾರ್ಕಳ ಡಿವೈಎಸ್ಪಿ ಭರತ್ ರೆಡ್ಡಿ ಅವರು ತಮ್ಮ ಕಚೇರಿಯಲ್ಲೇ ಪತ್ರಕರ್ತರೋರ್ವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮೊಬೈಲ್ ಕಸಿದುಕೊಂಡು ಬೆದರಿಕೆಯೊಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಅಪರ ಜಿಲ್ಲಾಧಿಕಾರಿ ದೂರಿನ ಪರಿಶೀಲನೆ ನಡೆಸಿ ಕ್ರಮವಹಿಸುವಂತೆ ಎಸ್ಪಿಯವರಿಗೆ ಸೂಚನೆ ನೀಡಿದ್ದಾರೆ.
ಪತ್ರಕರ್ತ ಕೃಷ್ಣ ನಾಯ್ಕ್ ಎಂಬವರು ಅ. 17ರಂದು ನೀಡಿದ ದೂರಿನ ಮೇರೆಗೆ ಅಪರ ಜಿಲ್ಲಾಧಿಕಾರಿಯವರು ಪರಿಶೀಲಿಸಿ ಕ್ರಮ ವಹಿಸುವಂತೆ ನ. 9ರಂದು ಎಸ್‌ಪಿ ಅವರಿಗೆ ಸೂಚಿಸಿರುತ್ತಾರೆ. ಪ್ರಕರಣದ ಕುರಿತು ತನಿಖೆ ನಡೆಸಿ, ನ್ಯಾಯ ಒದಗಿಸಿಕೊಡುವಂತೆ ಉಡುಪಿ ಜಿಲ್ಲಾ ಮರಾಠಿ ಸಂಘಟನೆ ಕೂಡ ಮನವಿ ಸಲ್ಲಿಸಿತ್ತು.

Previous articleಸರ್ವೆ ಕಾರ್ಯ ಗ್ರಾಮ ಲೆಕ್ಕಾಧಿಕಾರಿಗಳು ನಡೆಸುವಂತಾಗಲಿ- ಎನ್.‌ ಹರೀಶ್ಚಂದ್ರ ಹೆಗ್ಡೆ ಅಭಿಪ್ರಾಯ
Next articleಚೆನ್ನೈಯಲ್ಲಿ ಅಮಿತ್‌ ಶಾ ಮೇಲೆ ಪ್ಲೇ ಕಾರ್ಡ್‌ ಎಸೆತ

LEAVE A REPLY

Please enter your comment!
Please enter your name here