Friday, September 24, 2021
spot_img
Homeಉದ್ಯೋಗ ಮಾಹಿತಿ-ಅರ್ಜಿSSC CHSL ನೇಮಕಾತಿ 2020: 6000 ಹುದ್ದೆಗಳ ಭರ್ತಿಗೆ ಅಧಿಸೂಚನೆ

SSC CHSL ನೇಮಕಾತಿ 2020: 6000 ಹುದ್ದೆಗಳ ಭರ್ತಿಗೆ ಅಧಿಸೂಚನೆ

ದಿಲ್ಲಿ: ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್ ಸಿ) 2020-21ನೇ ಸಾಲಿನಲ್ಲಿ ವಿವಿಧ ಇಲಾಖೆ, ಕಚೇರಿ ಹಾಗೂ ಸಚಿವಾಲಯಗಳಲ್ಲಿ ಅಗತ್ಯವಿರುವ ಸಹಾಯಕರು, ಕ್ಲರ್ಕ್ ಸೇರಿದಂತೆ ಹಲವಾರು ಹುದ್ದೆಗಳನ್ನು ಭರ್ತಿಗೊಳಿಸಲು ನೇಮಕಾತಿ ಪ್ರಕಟನೆ ಹೊರಡಿಸಿದೆ.
ಸುಮಾರು 6,000 ಹುದ್ದೆಗಳಿದ್ದು ಈ ಕುರಿತು ವೆಬ್ ಸೈಟ್‌ನಲ್ಲಿ ಪ್ರಕಟನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆ ದಿನಾಂಕ.
ಹುದ್ದೆಗಳ ವಿವರ
ಸಂಸ್ಥೆ: ಸ್ಟಾಫ್ ಸೆಲೆಕ್ಷನ್ ಕಮಿಷನ್ (ಕೇಂದ್ರ ಸರ್ಕಾರಿ ಹುದ್ದೆ)
ಒಟ್ಟು ಹುದ್ದೆಗಳು: 6000 (ಬದಲಾವಣೆಗೆ ಒಳಪಟ್ಟಿರುತ್ತದೆ)
ಹುದ್ದೆ ಹೆಸರು: LDC, DEO, Assistant
ಉದ್ಯೋಗ ತಾಣ: ಭಾರತದೆಲ್ಲೆಡೆ
ಕೊನೆ ದಿನಾಂಕ: ಡಿಸೆಂಬರ್ 15, 2020
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪೂರೈಸಿರಬೇಕು.
ವಯೋಮಿತಿ: ಕನಿಷ್ಠ 18 ಮತ್ತು ಗರಿಷ್ಠ 27(10-12-2021ರಂತೆ) ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ, ಅಂಗವಿಕಲ ಎಸ್ ಸಿ/ ಎಸ್ಟಿ ಅಭ್ಯರ್ಥಿಗಳಿಗೆ 15 ವರ್ಷಗಳ ಸಡಿಲಿಕೆಯಿದೆ. ಅರ್ಜಿ ಶುಲ್ಕ: ಎಸ್ ಸಿ/ ಎಸ್ಟಿ/ ಅಂಗವಿಕಲ/ ಮಾಜಿ ಯೋಧರಿಗೆ ಯಾವುದೇ ಶುಲ್ಕವಿಲ್ಲ. ಇತರರಿಗೆ: 100 ರೂ. ಎಸ್ ಬಿಐ ಆನ್ ಲೈನ್ ಬ್ಯಾಂಕಿಂಗ್/ಚಲನ್/ ಡೆಬಿಟ್ ಮೂಲಕ ಪಾವತಿಸಬಹುದು.
ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭ : 06-11-2020
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15/12/2020
Notification : https://ssc.nic.in/SSCFileServer/PortalManagement/UploadedFiles/Notice_chsl_06112020.pdf
Apply Link : https://ssc.nic.in/

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!