ಕಾರ್ಕಳ : ಕಾನೂನು ಸೇವೆಗಳ ದಿನಾಚರಣೆ

0

ಕಾರ್ಕಳ : ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ನ. 12ರಂದು ಕೋರ್ಟ್‌ ಹಾಲ್‌ ಬಳಿ ನಡೆಯಿತು. ಹಿರಿಯ ಸಿವಿಲ್‌ ನ್ಯಾಯಾಧೀಶರಾದ ರೂಪಾಶ್ರೀ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಧಾನ ಸಿವಿಲ್‌ ನ್ಯಾಯಾಧೀಶ ಪುಟ್ಟರಾಜು, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸತೀಶ್‌ ಬಿ., ಸಹಾಯಕ ಸರಕಾರಿ ಅಭಿಯೋಜಕರಾದ ಶೋಭಾ ಎನ್‌. ನಾಯ್ಕ್‌, ಹೆಚ್ಚುವರಿ ಸಹಾಯಕ ಸರಕಾರಿ ಅಭಿಯೋಜಕ ಜಗದೀಶ್‌ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಕೆ. ಕೃಷ್ಣ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮಪ್ರಸಾದ್‌ ಜೈನ್‌ ಸ್ವಾಗತಿಸಿ, ನ್ಯಾಯವಾದಿಗಳ ಸಂಘದ ಜೊತೆ ಕಾರ್ಯದರ್ಶಿ ಮುಕ್ತ ಕಾರ್ಯಕ್ರಮ ನಿರ್ವಹಿಸಿದರು. ನಂದಿನಿ ಬಿ. ಶೆಟ್ಟಿ ವಂದಿಸಿದರು.

Previous articleSSC CHSL ನೇಮಕಾತಿ 2020: 6000 ಹುದ್ದೆಗಳ ಭರ್ತಿಗೆ ಅಧಿಸೂಚನೆ
Next articleಮಾಧ್ಯಮ ಅಕಾಡಮಿಯಲ್ಲಿ ಅಪ್ರೆಂಟಿಸ್‌ಗೆ ಅರ್ಜಿ ಆಹ್ವಾನ

LEAVE A REPLY

Please enter your comment!
Please enter your name here