ಪೊಲೀಸ್‌ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನ. 25
ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ : ನ.27
website :www.ksp.gov.in
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯು ವಿವಿಧ ಹುದ್ದೆಗಳನ್ನು ಭರ್ತಿಗೊಳಿಸಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ನ. 25 ಸಂಜೆ 6 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಗಳಲ್ಲಿ ಖಾಲಿ ಇರುವ ಸಹಾಯಕರು (ಪೋಟೋಗ್ರಫಿ), ಇ. ಇ. ಜಿ. ತಂತ್ರಜ್ಞರು, ಪ್ರಯೋಗಾಲಯ ಸೇವಕರ ಕಲ್ಯಾಣ-ಕಲ್ಯಾಣೇತರ ಹಾಗೂ ಕಲ್ಯಾಣ ಕರ್ನಾಟಕ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ.
ಅರ್ಜಿ ಶುಲ್ಕಗಳನ್ನು ಪಾವತಿ ಮಾಡಲು ನ.27 ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ ಕರ್ನಾಟಕ ಪೊಲೀಸ್ ಇಲಾಖೆ ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ) 1, ಇ.ಇ.ಜಿ. ತಂತ್ರಜ್ಞರು 6, ಪ್ರಯೋಗಾಲಯ ಸೇವಕರು 30 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಅರ್ಜಿ ಸಲ್ಲಿಸಲು http://www.ksp.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ವಿದ್ಯಾರ್ಹತೆ
ಇ.ಇ.ಜಿ. ತಂತ್ರಜ್ಞರ ಹುದ್ದೆಗೆ ವಿಜ್ಞಾನ ಪದವಿ/ ಇ.ಇ.ಜಿ. ತಾಂತ್ರಿಕ ಕೋರ್ಸ್/ ಮೆಡಿಕಲ್ ಲ್ಯಾಬ್‌ರೇಟರಿ ಟೆಕ್ ಕೋರ್ಸ್‌ನಲ್ಲಿ ಡಿಪ್ಲೊಮಾ ಪದವಿ ಪಡೆದಿರಬೇಕು ಅಥವಾ ಯಾವುದೇ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಪ್ರಯೋಗಾಲಯ ಸಹಾಯಕರು (ಪೋಟೋಗ್ರಫಿ) ಹುದ್ದೆಗೆ ಸಿನಿಮಾಟೋಗ್ರಫಿಯಲ್ಲಿ ಅಥವ ಫೋಟೋಗ್ರಫಿಯಲ್ಲಿ ಡಿಪ್ಲೊಮಾ ಪಡೆದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಸರ್ಕರದಿಂದ ಮಾನ್ಯತೆ ಹೊಂದಿರುವ ಸಂಸ್ಥೆಗಳಿಂದ ಪಡೆದಿರಬೇಕು. ಒಂದು ವರ್ಷದ ಪ್ರಾಯೋಗಿಕ ಅನುಭವನ್ನು ಅನಾಲಾಗ್ ಮತ್ತು ಡಿಜಿಟಲ್ ಪೋಟೋಗ್ರಫಿ ಉಪಕರಣಗಳ ನಿರ್ವಹಣೆಯನ್ನು ವಿಡಿಯೋಗ್ರಫಿ ಸಮೇತ ಹೊಂದಿರಬೇಕು.
ವಯೋಮಿತಿ
-ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ -2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷ
-ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷ.
ಅರ್ಜಿ ಶುಲ್ಕ
-ಸಾಮಾನ್ಯ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 250 ರೂ.
-ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ 1ರ ಅಭ್ಯರ್ಥಿಗಳಿಗೆ 100 ರೂ.
ಅರ್ಜಿ ಶುಲ್ಕವನ್ನು ನಗದು ರೂಪದಲ್ಲಿ ಅಂಚೆ ಕಚೇರಿ ಅಥವ ಹೆಚ್. ಡಿ. ಎಫ್‌. ಸಿ ಬ್ಯಾಂಕ್‌ನಲ್ಲಿ ಪಾವತಿ ಮಾಡದಿ ಚಲನ್ ಅನ್ನು ಅಭ್ಯರ್ಥಿಗಳು ಇಟ್ಟುಕೊಳ್ಳಬೇಕು.

Previous articleಮಾಳ : ಕ್ಷಯ ಹಾಗೂ ಕೊರೊನ ವೈರಸ್ ಕುರಿತು ಮಾಹಿತಿ ಶಿಬಿರ
Next articleಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ : ಕಾರ್ಕಳಕ್ಕೆ ಸಿಂಹಪಾಲು

LEAVE A REPLY

Please enter your comment!
Please enter your name here