ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ : ಕಾರ್ಕಳಕ್ಕೆ ಸಿಂಹಪಾಲು

0

ಕಾರ್ಕಳ, ಅ. 30 : ಉಡುಪಿ ಜಿಲ್ಲೆಯ 40 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಈ ಪೈಕಿ ಕಾರ್ಕಳಕ್ಕೆ ಒಟ್ಟು 12 ಪ್ರಶಸ್ತಿಗಳು ಸಿಕ್ಕಿವೆ.
ದೈವಾರಾಧನೆ ಕ್ಷೇತ್ರದಲ್ಲಿ ದೈವ ನರ್ತಕ ಕಾಂತಾವರದ ಮೋಂಟು ಪಾಣಾರ, ಮುದ್ರಾಡಿಯ ಮಂಜುನಾಥ ಶೇರಿಗಾರ, ಹೆಬ್ರಿ ತಾಲೂಕು ಅಲ್ಬಾಡಿ ಗ್ರಾಮದ ರಂಗ ಪಾಣ, ರಂಗಭೂಮಿ ಕ್ಷೇತ್ರದಲ್ಲಿ ಎಳ್ಳಾರೆ ಗ್ರಾಮದ ವಸಂತ ಪೂಜಾರಿ ಮುನಿಯಾಲು, ಯೋಗ ಕ್ಷೇತ್ರದಲ್ಲಿ ಶೇಖರ ಕಡ್ತಲ, ಶಿಲ್ಪಕಲೆ ಕ್ಷೇತ್ರದಲ್ಲಿ ಆರ್.‌ ರಾಧಾ ಮಾಧವ ಶೆಣೈ, ಕಲಾ ಕ್ಷೇತ್ರದಲ್ಲಿ ಸುರೇಂದ್ರ ನೂರಾಲ್‌ಬೆಟ್ಟು , ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಎಂ. ರವಿರಾಜ ಶೆಟ್ಟಿ, ಸಮಾಜಸೇವೆ ಕ್ಷೇತ್ರದಲ್ಲಿ ಜಯಂತ್‌ ರಾವ್‌ ಪಿ. ಬೆಳ್ಮಣ್ಣು, ಶಿಕ್ಷಣ ಕ್ಷೇತ್ರದಲ್ಲಿ ಡಾ. ಸುಧಾಕರ ಶೆಟ್ಟಿ (ಜ್ಞಾನಸುಧಾ), ಸಂಗೀತ ಕ್ಷೇತ್ರದಲ್ಲಿ ಕಾರ್ಕಳದ ಪ್ರಕಾಶ್‌ ದೇವಾಡಿಗ, ಸಂಘ ಸಂಸ್ಥೆ ವಿಭಾಗದಲ್ಲಿ ದುರ್ಗಾ ಪರಮೇಶ್ವರಿ ಫ್ರೆಂಡ್ಸ್‌ ಕ್ಲಬ್‌, ಅಬ್ಬನಡ್ಕ ನಂದಳಿಕೆ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.

Previous articleಪೊಲೀಸ್‌ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Next articleಭಾರತದ ಏಕತೆಯ ರೂವಾರಿ ಸರ್ದಾರ್‌ ಪಟೇಲ್‌

LEAVE A REPLY

Please enter your comment!
Please enter your name here