ಕಾರ್ಕಳ : ಸಂಕಲಕರಿಯ ಹಾಲು ಉತ್ಪಾದಕರ ಸಂಘದ ವ್ಯಾಪ್ತಿಯ ಸುಮಾರು 120 ಜಾನುವಾರುಗಳಿಗೆ ಪಶು ಇಲಾಖೆ ವತಿಯಿಂದ ಅ.16ರಂದು ಕಾಲು ಬಾಯಿ ಲಸಿಕೆ ಹಾಕಲಾಯಿತು. ಪಶು ಇಲಾಖೆಯ ಡಾ. ನರಸಿಂಹ, ಡಾ. ನದಾಫ್, ಉಗ್ಗೆದಬೆಟ್ಟು ರವಿ ಶೆಟ್ಟಿ, ಒಕ್ಕೂಟದ ಸದಾನಂದ, ಸಂಕಲಕರಿಯ ಸಂಘದ ಅಧ್ಯಕ್ಷ ಶರತ್, ಕಾರ್ಯದರ್ಶಿ ಸುರೇಶ್, ಹಾಲು ಉತ್ಪಾದಕರ ಸಂಘದ ನಿರ್ದೇಶಕರು, ಸ್ಥಳೀಯ ಹೈನುಗಾರರು ಈ ಸಂದರ್ಭದಲ್ಲಿದ್ದರು.
ಸಂಕಲಕರಿಯ : ದನಗಳಿಗೆ ಕಾಲುಬಾಯಿ ಲಸಿಕೆ














































































