ಒ ರಕ್ತದ ಗುಂಪಿನವರಿಗೆ ಕೊರೊನಾ ಅಪಾಯ ಕಡಿಮೆ

ದಿಲ್ಲಿ, ಅ. 17: ಕೊರೊನಾ ವೈರಸ್‌ ಕುರಿತಾಗಿ ಜಗತ್ತಿನಾದ್ಯಂತ ಅಸಂಖ್ಯಾತ ಸಂಶೋಧನೆಗಳು ಮತ್ತು ಅಧ್ಯಯನಗಳು ನಡೆಯುತ್ತಾ ಇವೆ. ಒಂದೊಂದು ಸಂಶೋಧನೆಯಲ್ಲೂ ಒಂದೊಂದು ಅಚ್ಚರಿಯ ಅಂಶ  ಬೆಳಕಿಗೆ ಬರುತ್ತಿದೆ.

 ಇದೀಗ ಒಂದು ಸಂಶೋಧನೆಯಲ್ಲಿ ವಿಜ್ಞಾನಿಗಳು ಒ ಗುಂಪಿನ ರಕ್ತ ಹೊಂದಿರುವವರು ಕೊರೊನಾ ಸೋಂಕಿಗೆ ತುತ್ತಾಗುವ ಅಪಾಯ ಉಳಿದವರಿಗಿಂತ ಕಡಿಮೆ ಎಂಬ ಅಂಶವನ್ನು ಪತ್ತೆಹಚ್ಚಿದ್ದಾರೆ.

ಈ ಸಂಶೋಧನೆ ವೈರಸ್‌ಗೂ ವ್ಯಕ್ತಿಗಳ ರಕ್ತದ ಗುಂಪಿಗೂ ನೇರ ಸಂಬಂಧವಿದೆ ಎಂಬ ವಿಚಾರದ ಮೇಲೂ ಬೆಳಕು ಚೆಲ್ಲಿದೆ.

ಜಗತ್ತಿನಾದ್ಯಂತ ಕೊರೊನಾ ಸೋಂಕಿಗೆ ತುತ್ತಾದವರಲ್ಲಿ ಒ ರಕ್ತದ ಗುಂಪಿನವರ ಸಂಖ್ಯೆ ಕಡಿಮೆಯಿದೆ ಎಂಬ ಅಂಶವೂ ಈ ಸಂಶೋಧನೆಯನ್ನು ಪುಷ್ಟೀಕರಿಸಿದೆ.

ಎ, ಬಿ ಅಥವಾ ಎಬಿ  ರಕ್ತದ ಗುಂಪಿನವರು ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಡೆನ್ಮಾರ್ಕಿನಲ್ಲಿ ಸುಮಾರು 4.7 ಲಕ್ಷ ಮಂದಿಯ ಮೇಲೆ ಪ್ರಯೋಗ ಮಾಡಿ ವಿಜ್ಞಾನಿಗಳು ಈ ಅಂಶವನ್ನು ಕಂಡುಕೊಂಡಿದ್ದಾರೆ.

































































































































































error: Content is protected !!
Scroll to Top