ಉಡುಪಿ : ಹಳೆ ಕಟ್ಟಡ ಕುಸಿತ

ಉಡುಪಿ, ಸೆ. 18 : ಉಡುಪಿ ನಗರದ ಹೃದಯ ಭಾಗದಲ್ಲಿರುವ ರೋಯಲ್ ಮಾಲ್ ವಸತಿ ಗೃಹದ ಒಂದು ಪಾರ್ಶ್ವ ಇಂದು ಕುಸಿದು ಬಿದ್ದಿದೆ. ಆದರೆ  ಕಟ್ಟದಲ್ಲಿರುವವರು ಪವಾಡ ಸದೃಶವಾಗಿ  ಪಾರಾಗಿದ್ದಾರೆ.
ನಗರದ ಚಿತ್ತರಂಜನ್ ವೃತ್ತದಲ್ಲಿರುವ ರೋಯಲ್ ಮಾಲ್ ಹಳೆಯ ಕಟ್ಟಡವಾಗಿದ್ದು, ಇದ ನೆಲ ಅಂತಸ್ತಿನಲ್ಲಿರುವ ಚಿಪ್ಸ್ ಅಂಗಡಿ ಸಂಪೂರ್ಣವಾಗಿ ನಾಶವಾಗಿದೆ.  ಪಕ್ಕದಲ್ಲಿರುವ ಜನ ಔಷಧ  ಕೇಂದ್ರವು ಭಾಗಶಃ ಕುಸಿದಿದೆ.

ಶಿಥಿಲಗೊಂಡಿದ್ದ ಕಟ್ಟಡ ಮೂರು  ದಿನ ಸುರಿದ ನಿರಂತರ ಮಳೆಯಿಂದ ಕುಸಿದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಕಟ್ಟಡದ ಉಳಿದ ಭಾಗವೂ ಕುಸಿಯುವ ಭೀತಿಯಲ್ಲಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗು ನಗರ ಪೊಲೀಸ್ ಸ್ಥಳಕ್ಕೆ ಧಾವಿಸಿ ಸಂಚಾರ ಸುಗಮಗೊಳಿಸಿದರು.









































































































error: Content is protected !!
Scroll to Top