ಸೆ.21ರಿಂದ ತರಗತಿಗಳು ಆರಂಭವಾಗುವುದಿಲ್ಲ : ಸುರೇಶ್‌ ಕುಮಾರ್‌

ಬೆಂಗಳೂರು, ಸೆ. 18 : ಕೇಂದ್ರ ಸರಕಾರದ ಸೂಚನೆಯಂತೆ ಸೆ. 21 ರಿಂದ ಶಾಲೆಗಳು ಆರಂಭವಾಗುತ್ತಿಯಾದರೂ ತರಗತಿಗಳು ಆರಂಭವಾಗುವುದಿಲ್ಲ. ಶಿಕ್ಷಕರು ಮಾತ್ರ ಶಾಲೆಗೆ ಬರಬೇಕು ಎಂದು  ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಶಾಲೆಗಳಲ್ಲಿ ತರಗತಿಗಳನ್ನು ಆರಂಭಿಸಲು ಕೇಂದ್ರ ಸರಕಾರದಿಂದ ಇನ್ನೂ ಆನುಮತಿ ಬಂದಿಲ್ಲ ಅದನ್ನು ಎದುರು ನೋಡುತ್ತಿದ್ದೇವೆ. ಕೊರೊನಾ ಹಾವಳಿ ಕಡಿಮೆಯಾಗದಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಿಗೆ ಇನ್ನೂ ಆತಂಕವಿದೆ ಎಂದಿದ್ದಾರೆ.

ಸೆ.21ರಿಂದ 9 ರಿಂದ  12ನೇ ತರಗತಿ ತನಕ ಶಾಲೆಗಳನ್ನು ಆರಂಭಿಸಬಹುದು ಎಂದು ಕೆಲ ದಿನಗಳ ಹಿಂದೆ ಕೇಂದ್ರ ಸರಕಾರ ಹೇಳಿತ್ತು ಹಾಗೂ ಅದಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿತ್ತು. ಆದರೆ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಆಯಾಯ ರಾಜ್ಯ ಸರಕಾರಗಳಿಗೆ ಬಿಟ್ಟಿದೆ.

1  ರಿಂದ  10ನೇ ತರಗತಿ ತನಕದ ದಾಖಲಾತಿ ಸೆ.30ರೊಳಗೆ ಮುಗಿಯುತ್ತದೆ. ಖಾಸಗಿ ಶಾಲೆಗಳು ಒಂದು ಅವಧಿಯ ಶುಲ್ಕವನ್ನು ಮಾತ್ರ ಪಡೆಯಬೇಕು ಎಂದು ಸುರೇಶ್‌ ಕುಮಾರ್‌ ಹೇಳಿದ್ದಾರೆ.





























































































error: Content is protected !!
Scroll to Top