ಡ್ರಗ್‌ ನಂಟು : ಮತ್ತೆ ಮೂವರಿಗೆ ವಿಚಾರಣೆಗೆ ಹಾಜರಾಗಲು ನೊಟೀಸ್‌

ಬೆಂಗಳೂರು, ಸೆ. 18: ಸ್ಯಾಂಡಲ್‌ವುಡ್‌  ಡ್ರಗ್‌ ನಂಟಿಗೆ ಸಂಬಂಧಿಸಿ ಇನ್ನಷ್ಟು ಮಂದಿಯನ್ನು ವಿಚಾರಣೆಗೊಳಪಡಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.  ಚಿತ್ರರಂಗಕ್ಕೆ ಸೇರಿದ ಮತ್ತೆ ಮೂವರಿಗೆ ಕೇಂದ್ರ ಅಪರಾಧ ದಳ (ಸಿಸಿಬಿ) ನೋಟಿಸ್ ನೀಡಿದೆ.

ಶನಿವಾರ ವಿಚಾರಣೆಗೆ ಹಾಜರಾಗುವಂತೆ ಕಿರುತೆರೆ ನಿರೂಪಕ ಹಾಗೂ ನಟ ಅಕುಲ್ ಬಾಲಾಜಿ, ಮಾಜಿ ಶಾಸಕ ದಿ. ಆರ್‌.ವಿ. ದೇವರಾಜ್ ಅವರ ಮಗ, ಮಾಜಿ ಕಾರ್ಪೊರೇಟರ್ ಆರ್‌.ವಿ. ಯುವರಾಜ್ ಮತ್ತು ನಟ ಸಂತೋಷ್ ಕುಮಾರ್ ಅವರಿಗೆ ಸಿಸಿಬಿ ಶುಕ್ರವಾರ ನೋಟಿಸ್ ಜಾರಿ ಮಾಡಿ
ಶನಿವಾರ ಬೆಳಿಗ್ಗೆ 10 ಗಂಟೆಗೆ ಹಾಜರಾಗುವಂತೆ ಸೂಚಿಸಿದೆ. ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ನೀಡಿರುವ ಮಾಹಿತಿ ಆಧಾರದಲ್ಲಿ ಈ ಮೂವರಿಗೆ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ. ತಮಗೆ ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸಲಾಗಿದೆ.





























































































error: Content is protected !!
Scroll to Top