ದಿಲ್ಲಿ, ಸೆ. 18: ಭಾರತದ ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಆನೌಪಚಾರಿಕ ವಲಯ ಮಾತ್ರವಲ್ಲ ಔಪಚಾರಿಕ ವಲಯದಲ್ಲೂ ಕೊರೊನಾದಿಂದಾಗಿ ಭಾರಿ ಸಂಖ್ಯೆಯ ಉದ್ಯೋಗ ನಷ್ಟವಾಗಿದೆ ಎಂದು ಹೇಳುತ್ತಿದೆ ಒಂದು ಸಮೀಕ್ಷೆ.
ಕನ್ಸ್ಯೂಮರ್ ಪಿರಾಮಿಡ್ಸ್ ಹೌಸ್‌ಹೋಲ್ಡ್ ಸರ್ವೆ ಎಂಬ ಸಮೀಕ್ಷೆ ತಿಳಿಸುವ ಪ್ರಕಾರ ಮೇ ಮತ್ತು ಆಗಸ್ಟ್ ತಿಂಗಳ ನಡುವೆ 66 ಲಕ್ಷ ಬಿಳಿ ಕಾಲರ್ ನೌಕರಿಗಳು ನಷ್ಟವಾಗಿವೆ. ಬಿಳಿ ಕಾಲರ್ ನೌಕರಿಗಳೆಂದರೆ ಔಪಚಾರಿಕ ವಲಯದ ಬಹುತೇಕ ಕಚೇರಿಗಳ ಒಳಗಿನ ಕೆಲಸ.
2016ರಿಂದೀಚೆಗೆ ಇಷ್ಟೊಂದು ವೈಟ್ ಕಾಲರ್ ನೌಕರಿಗಳು ಕಳೆದು ಹೋಗಿರುವುದು ಇದೇ ಮೊದಲು.




















