ಮೇಷ
ನಿರ್ದಿಷ್ಟ ಸಮಯದೊಳಗೆ ಕೆಲಸಗಳನ್ನು ಮುಗಿಸಬೇಕಾದ ಒತ್ತಡ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ನಿಮ್ಮನ್ನೆ ನಂಬಿಕೊಂಡು ಬದುಕುತ್ತಿರುವವರನ್ನು ನೀವು ಗಮನಿಸುತ್ತಿರಬೇಕು.ಆರ್ಥಿಕ ಪರಿಸ್ಥಿತಿ ಹಂತ ಹಂತವಾಗಿ ಸುಧಾರಣೆಗೊಳ್ಳುತ್ತಿದೆ.ನಿಮ್ಮ ಪತ್ನಿಯ ಆರೋಗ್ಯದ ಕಡೆಗೆ ಗಮನವಿರಲಿ.ಅವರಲ್ಲಿ ರಕ್ತದ ಕೊರತೆಯ ಸಮಸ್ಯೆ ಇದೆ. ಲಕ್ಷ್ಮೀ ನರಸಿಂಹ ದೇವರನ್ನು ಪ್ರಾರ್ಥಿಸಿರಿ.
ವೃಷಭ

ದೂರವಾಗಿದ್ದ ಆಪ್ತರು ಹತ್ತಿರವಾಗುತ್ತಿದ್ದಾರೆ.ನಿಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿ ವಿಸ್ತಾರ ಗೊಳ್ಳುತ್ತಿದೆ.ಗುರು ಅಷ್ಟಮದಲ್ಲಿ ಇರುವಾಗ ಎಚ್ಚರಿಕೆಯ ಹೆಜ್ಜೆ ಇಡಬೇಕು .ಯಾರನ್ನೂ ಹೆಚ್ಚು ನಂಬದೆ ನಂಬಿದವರಂತೆ ವರ್ತಿಸಬೇಕು.ಅಡೆತಡೆಗಳು ಬಂದಾಗಲೂ ಹೊಸ ಹುರುಪು ನಿಮ್ಮಲ್ಲಿ ಇರುತ್ತದೆ. ಆರೋಗ್ಯದತ್ತ ಗಮನ ಹರಿಸಬೇಕು.ವಾಹನದಲ್ಲಿ ಹೆಚ್ಚು ಸಂಚಾರ ಮಾಡುವುದರಿಂದ ಬೆನ್ನು ನೋವು ಕಾಡಲಿದೆ.
ಮಿಥುನ
ವಿದ್ಯಾರ್ಥಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಂಚಲತೆ ಹೆಚ್ಚುತ್ತಿದೆ. ಎಲುಬು ನರಗಳಿಗೆ ತೊಂದರೆಯಾಗುವ ಸಾಧ್ಯತೆಯನ್ನು ಶನಿ ತಿಳಿಸುತ್ತಿದ್ದಾನೆ. ವಿಷ್ಣು ದೇವರ ಸಹಸ್ರನಾಮ ನಿತ್ಯ ಪಾರಾಯಣ ಮಾಡುತ್ತಾ ಬನ್ನಿರಿ. ಯೋಗ ಪ್ರಾಣಾಯಾಮದ ಆವಶ್ಯಕತೆ ಈಗ ಇದೆ.
ಕರ್ಕಾಟಕ
ಮಹಿಳೆಯರಿಗೆ ಜೀವನದಲ್ಲಿ ಜುಗುಪ್ಸೆ ಹೊಂದುವ ಸಮಯವಿದು .ಆದರೆ ನಿಮಗೆ ರವಿ ಬುಧರು ಜೊತೆಯಾಗಿದ್ದುಕೊಂಡು ನೈಪುಣ್ಯತೆಯ ಯೋಗ ಕೊಟ್ಟಿದ್ದಾರೆ. ಯೋಚಿಸುವ ಶಕ್ತಿ ಕೊಟ್ಟಿದ್ದಾರೆ.ಪ್ರೀತಿ ಪ್ರೇಮ ಕಾಟಕ್ಕೆ ಬಲಿಯಾಗದೆ ಸಜ್ಜನರ ಸಂಗವನ್ನು ಮಾಡುತ್ತಾ ಮುನ್ನೆಡೆಯಿರಿ.ಹಿರಿಯರೊಂದಿಗೆ ಹೊಂದಿಕೊಂಡು ಮುನ್ನಡೆಯಿರಿ.
ಸಿಂಹ
ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ಸ್ಪರ್ಧೆ ಸ್ವಾಭಾವಿಕವಾಗಿ ಇರುತ್ತದೆ. ಕಲಹದಿಂದ ದೂರವಾಗಿ ಇರಲು ಕಲಿಯಿರಿ. ಸಾಂಸಾರಿಕವಾಗಿಯೂ ಅನೇಕ ರೀತಿಯಲ್ಲಿ ಉದ್ವೇಗ ಕಲಹ ಇರುತ್ತದೆ.ಗುರು ನಿಮಗೆ ಪೂರ್ಣಾನುಗ್ರಹ ನೀಡುತ್ತಿರುವಾಗ ಬೇರೆ ಚಿಂತೆ ಏತಕೆ. ಮನೆಯಲ್ಲಿ ಶುಭ ಮಂಗಳ ಕೆಲಸಗಳು ನಡೆಯಲಿವೆ.
ಕನ್ಯಾ
ಸಹೋದರರ ಜೊತೆಗೆ ಭೂಮಿ ಸಂಬಂಧವಾಗಿ ಕಲಹದ ಸೂಚನೆಯನ್ನು ಕುಜ ಕೊಡುತ್ತಿದ್ದಾನೆ .ಭೂಮಿ ವ್ಯವಹಾರ ಮಾಡುವವರು ನಷ್ಟ ಅನುಭವಿಸಲಿದ್ದಾರೆ.ಭೂಮಿಯ ದಾಖಲೆ ಪತ್ರವನ್ನುಪರಿಶೀಲಿಸಿಕೊಳ್ಳಿರಿ .ಮಕ್ಕಳು ಮೊಬೈಲ್ ಕೇಳುತ್ತಿದ್ದಾರೆ. ಅವರಿಗೆ ಅಗತ್ಯವಿದೆ. ಕಲಹ ಬರಲಿದೆ .ನಿಮ್ಮ ಜೊತೆಯಲ್ಲಿರುವವರು ಸರಿಯಾಗಿಲ್ಲ .
ತುಲಾ
ನೀವು ನಡೆಸುವ ಅನೇಕ ವ್ಯವಹಾರಗಳನ್ನು ಶನಿ ಅಡೆತಡೆಗಳಿಂದಲೇ ಮುಂದುವರಿಸುತ್ತಾನೆ. ರಾಜಕೀಯದಲ್ಲಿರುವವರು ತುಂಬಾ ಪ್ರಕಾಶ ಮಾನರಾಗಲಿದ್ದಾರೆ.ಮತ್ಸರಪಡುವವರು ಇವರ ಹಿಂದೆಯೇ ಇರುತ್ತಾರೆ.ಮದುವೆ ನಿಶ್ಚಯವಾದದ್ದುರದ್ದು ಆಗುವ ಸಾಧ್ಯತೆ ಇದೆ ಎಂಬ ಸೂಚನೆಯನ್ನು ಕುಜ ತಿಳಿಸುತ್ತಿದ್ದಾನೆ.
ವೃಶ್ಚಿಕ
ಆರ್ಥಿಕವಾಗಿ ನಿಮ್ಮನ್ನು ದ್ವಿತೀಯದ ಗುರು ನವೆಂಬರ್ 20 ರ ವರೆಗೂ ಮುಂದುವರಿಸುತ್ತಲೆ ಹೋಗುತ್ತಾನೆ. ಶಾರೀರಿಕವಾಗಿ ಮಾನಸಿಕವಾಗಿಯೂ ಸಂಸಾರದಲ್ಲಿ ನೆಮ್ಮದಿಯ ವಾತಾವರಣ ಮೂಡಲಿದೆ. ಸೆಪ್ಟೆಂಬರ್ 23ರ ವರೆಗೆ ರಾಹು ಅಷ್ಟಮದಲ್ಲಿದ್ದುಕೊಂಡು ಶರೀರದಲ್ಲಿ ಚರ್ಮ ಕಾಯಿಲೆ ಅಲರ್ಜಿ ತರಲಿರುವುದರಿಂದ ನಾಗ ದೇವರ ಸೇವೆ ಅತೀ ಅಗತ್ಯವಾಗಿದೆ.
ಧನು
ನವಗ್ರಹರ ಚಲನೆ ನಮ್ಮ ಮೇಲೆ ನೇರವಾದ ಪರಿಣಾಮ ಬೀರುತ್ತದೆ .ಸಂತೋಷ , ಬೇಸರ ಹಗಲು ರಾತ್ರಿಯಂತೆ ಬರುತ್ತಲೇ ಇರುತ್ತದೆ. ಈಗ ನಿಮಗೆ ಎಲ್ಲವೂ ಮೊದಲಿನಂತೆಯೇ ಸಿಗಲಾರದು. ಶರೀರದಲ್ಲಿ ಮೊದಲಿನಂತೆಯೇ ಶಕ್ತಿ ಇಲ್ಲ. ಬರುತ್ತಿರುವ ಧನಾದಾಯದಲ್ಲಿ ವ್ಯತ್ಯಾಸವಾಗಿದೆ ಇದನ್ನೇ ನಾವು ಕಾಲಚಕ್ರ ಎನ್ನುವುದು .ಮಕ್ಕಳೊಂದಿಗೆ ಅವರು ಹೇಳಿದಂತೆಯೇ ನಡೆಯಿರಿ.
ಮಕರ
ಪ್ರಸ್ತುತ ಎಲ್ಲ ವಿಚಾರಗಳಲ್ಲಿ ಹೊಂದಾಣಿಕೆಯಿಂದ ಮುಂದುವರಿಯಿರಿ. ಪಿತ್ರಾರ್ಜಿತ ಆಸ್ತಿಯ ಬಗ್ಗೆ ಕಲಹ ಬರದಂತೆ ಎಚ್ಚರ ವಹಿಸಿರಿ.ಅಲ್ಲಿರುವ ನಾಗ ದೇವರ ಸನ್ನಿಧಾನವನ್ನು ಪೂಜಿಸುತ್ತಾ ಬನ್ನಿರಿ. ಈಗ ಇರುವ ಉದ್ಯೋಗದಲ್ಲಿ ಸಮಾಧಾನದಿಂದ ಇರುವುದು ಒಳ್ಳೆಯದು.ರಕ್ತದೊತ್ತಡ ಇರುವವರು ಎಚ್ಚರವಿರಬೇಕು .ಹೃದಯ ಸಂಬಂಧಿ ಸಮಸ್ಯೆ ಇರುವವರು ತಪಾಸಣೆ ಮಾಡಿಸಿಕೊಳ್ಳಿರಿ.
ಕುಂಭ
ಯಾವುದೇ ರೀತಿಯ ವ್ಯವಹಾರ ನಡೆಸುವವರಿಗೆ ನೆಮ್ಮದಿಯ ಕಾಲವೆನ್ನಬೇಕು.ವ್ಯಯದ ಶನಿ ಅಡೆತಡೆ ತಂದರೂ ದೈವಾನುಗ್ರಹ ಇರುವುದರಿಂದ ಎಲ್ಲವೂ ನಿಮ್ಮ ಮನಸ್ಸಿನಲ್ಲಿರುವಂತೆಯೇ ನಡೆಯಲಿದೆ. ರಾಜಕೀಯ ವ್ಯಕ್ತಿಗಳು ದುಡುಕು ಸಿಟ್ಟನ್ನು ಆದಷ್ಟು ಕಡಿಮೆ ಮಾಡಿಕೊಂಡು ಮುಂದುವರಿಯಬೇಕು.
ಮೀನ
ಸುಖ ಸ್ಥಾನದಲ್ಲಿ ರಾಹು ಇರುವುದರಿಂದ ಆಗಾಗ ನಿಮ್ಮ ಮನಸ್ಸಿಗೆ ಕಿರಿಕಿರಿ ಬರುತ್ತಲೇ ಇರುತ್ತದೆ.ಸಂತಾನದ ವಿಷಯದಲ್ಲಿ ಮಕ್ಕಳ ವಿಷಯದಲ್ಲಿ ನೆಮ್ಮದಿಯಿಲ್ಲ. ಗರ್ಭಿಣಿಯರು ಬಹಳ ಎಚ್ಚರವ ಹಿಸುವಂತೆ ಶುಕ್ರ ಮತ್ತು ಚಂದ್ರ ಸೂಚಿಸುತ್ತಿದ್ದಾರೆ. ದುರ್ಗಾ ಸ್ತೋತ್ರವನ್ನು ನಿತ್ಯವೂ ಪಾರಾಯಣ ಮಾಡಿರಿ.
ಜ್ಯೋತಿಷ್ಯರು

ಕೆ.ಸುಬ್ರಹ್ಮಣ್ಯ ಆಚಾರ್ಯ
ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ,
ಹಿರಿಯಂಗಡಿ ಕಾರ್ಕಳ
ಸಂಪರ್ಕ : 97414 89529/80739 73603



































































