ನಿತ್ಯ ಭವಿಷ್ಯ 03-08-2020

ಮೇಷ
ಆರೋಗ್ಯದಲ್ಲಿ ತುಸು ಏರುಪೇರಾಗುವ ಸಾಧ್ಯತೆ ಇದ್ದಾಗ್ಯೂ ಗುರು ಭಾಗ್ಯದಲ್ಲಿರುವುದರಿಂದ ನಿಮ್ಮ ಬದುಕಿನಲ್ಲಿ ಹೊಸ ಹೆಜ್ಜೆಯಿಡಲು ಸಕಾಲ. ಮಾತು ಎಚ್ಚರಿಕೆಯಿಂದಿರಲಿ.
ವೃಷಭ
ಶುಕ್ರ ರಾಹು ದ್ವಿತೀಯದಲ್ಲಿದ್ದು ನಿಮ್ಮ ಮಾತಿನ ಮೋಡಿಯಿಂದಲೇ ಯಶಸ್ವಿಯಾಗುವಿರಿ. ಸಹೋದರ ವರ್ಗದವರೊಂದಿಗೂ ಉತ್ತಮ ಬಾಂಧವ್ಯವಿರುತ್ತದೆ. ಭೂ ವ್ಯವಹಾರದಿಂದ ಉತ್ತಮ ಲಾಭ ಗಳಿಸುವಿರಿ.
ಮಿಥುನ
ಅಷ್ಟಮದಲ್ಲಿ ಶನಿ ಇರುವುದರಿಂದ ಹಿರಿಯರ ಆರೋಗ್ಯದ ಬಗ್ಗೆ, ನಿಮ್ಮ ಬಗ್ಗೆ ಜಾಗ್ರತೆ ವಹಿಸಿರಿ. ಅನಾವಶ್ಯಕ ಆರ್ಥಿಕ ಚಿಂತೆ ನಿಮ್ಮನ್ನು ಕಾಡಲಿವೆ. ಆದರೂ, ಸಪ್ತಮದ ಗುರು ನಿರೀಕ್ಷಿಸಿದ ಬದಲಾವಣೆಯನ್ನು ತರಲಿದ್ದಾನೆ.
ಕರ್ಕಾಟಕ
ರವಿ ಬುಧ ಮಿತ್ರರಾಗಿದ್ದರೂ ಶತ್ರುವಾದ ಶನಿಯು ಸಪ್ತಮದಲ್ಲಿರುವುದರಿಂದ ವೈವಾಹಿಕ ಜೀವನದಲ್ಲಿ ಅಪವಾದ ತರುವ ಸಾಧ್ಯತೆಯಿದೆ. ಪ್ರೀತಿ ಪ್ರೇಮದಿಂದ ದೂರವಿರುವುದು ಒಳ್ಳೆಯದು.
ಸಿಂಹ
ಕೆಲವರು ನಿಮ್ಮನ್ನು ತೆಗಳುತ್ತಲೇ ಇರುತ್ತಾರೆ. ಅವರನ್ನು ನಿರ್ಲಕ್ಷಿಸಿರಿ. ಕುಜ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಾನೆ. ನಿಮ್ಮ ಮನಸ್ಸು ಮತ್ತು ಆರೋಗ್ಯ ಸಮತೋಲನದಲ್ಲಿರಲಿ.
ಕನ್ಯಾ
ಮನೆ, ವಾಹನ ಖರೀದಿಯ ಯೋಚನೆ ಮೂಡಲಿದೆ. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಕಾಡಲಿದೆ. ಪತ್ನಿಯೊಂದಿಗೆ ವಿರಸ ಬರಲಿದೆ. ಕುಟುಂಬದ ಇತರ ಮಹಿಳೆಯರೊಂದಿಗೆ ಸಂಬಂಧ ಉತ್ತಮವಾಗಿರಲಿ.
ತುಲಾ
ನಿಮ್ಮ ಎಲ್ಲ ವ್ಯವಹಾರದಲ್ಲಿ ಸವಾಲುಗಳು ಎದುರಾಗಲಿವೆ. ನಿಮ್ಮಲ್ಲಿ ತಪ್ಪುಗಳನ್ನು ಹಿಡಿಯುವವರೇ ಅಧಿಕವಾಗಿದ್ದಾರೆ. ಶಾಂತಚಿತ್ತರಾಗಿ ವ್ಯವಹರಿಸುವುದು ಉತ್ತಮ. ಹಿತಶತ್ರುಗಳು ಅಧಿಕವಾಗಿದ್ದಾರೆ.
ವೃಶ್ಚಿಕ
ದ್ವಿತೀಯದ ಗುರು ನಾನಾ ಮೂಲಗಳಿಂದ ಆದಾಯವನ್ನು ತರುತ್ತಾನೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಯಶಸ್ವಿಯಾಗುವರು. ಪಂಚಮದಲ್ಲಿ ಷಷ್ಠಾಧಿಪತಿ ಕುಜನಿರುವುದರಿಂದ ತಂದೆ ಮಗನ ಮಧ್ಯೆ ವೈರತ್ವ ಬರದಂತೆ ಎಚ್ಚರವಹಿಸಿರಿ.
ಧನು
ಮನೆಯ ಬದಲಾವಣೆ ಸಾಧ್ಯತೆಯಿದೆ. ಆರೋಗ್ಯದ ಕಡೆಗೆ ಗಮನವಿರಲಿ. ಸಾಡೇಸಾತ್ ಶನಿ ಕಾಟವಿರುವುದರಿಂದ ಎಲ್ಲಾ ವಿಷಯಗಳಲ್ಲಿ ಎಚ್ಚರವಿರಲಿ.
ಮಕರ
ದಂಪತಿಗಳು ಬಹಳ ಎಚ್ಚರದಿಂದಿರಬೇಕು. ಜನ್ಮದ ಶನಿ ನೀವು ಉದ್ಯೋಗ ಮಾಡುವ ಸ್ಥಳದಿಂದ ಸ್ಥಳಾಂತರವಾಗುವಂತೆ ಮಾಡಬಹುದು. ನಿಮ್ಮಲ್ಲಿ ಜಡತ್ವವನ್ನು ಮೂಡಿಸಬಹುದು. ಸಹೋದರನ ಜೊತೆಗೆ ವೈಮನಸ್ಸು ಬರಲಿದೆ.
ಕುಂಭ
ಶನಿ ವ್ಯಯದಲ್ಲಿ ಬಂದಿರುವುದರಿಂದ ಗುರು ಲಾಭ ಕ್ಷೇತ್ರದಲ್ಲಿರುವುದಾದರೂ ಎಲ್ಲೆಲ್ಲೂ ನಷ್ಟವೇ ತುಂಬಿರುತ್ತದೆ. ಈ ವರೆಗೆ ನಿಮ್ಮಲ್ಲಿದ್ದ ಅಹಂಕಾರದ ಸಿಟ್ಟು ಇನ್ನು ಪ್ರಯೋಜನಕ್ಕೆ ಬರುವುದಿಲ್ಲ.
ಮೀನ
ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ ಬಂದು ವರ್ಗಾವಣೆಯನ್ನು ಬಯಸುವಿರಿ. ಆದಾಯ ಬಹಳ ಉತ್ತಮವಿರುತ್ತದೆ. ಅದಕ್ಕೆ ಸರಿಯಾಗಿ ಖರ್ಚು ಇರುತ್ತದೆ. ಮನೆ, ವಾಹನ ಖರೀದಿ ಯೋಗವಿದೆ.

ಕೆ. ಸುಬ್ರಹ್ಮಣ್ಯ ಆಚಾರ್ಯ
ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ
ಹಿರಿಯಂಗಡಿ ಕಾರ್ಕಳ
9741489529error: Content is protected !!
Scroll to Top