ಕಾರ್ಕಳ: ರಕ್ಷಾ ಬಂಧನದ ಪ್ರಯುಕ್ತ ರೋಟರಿ ಆನ್ಸ್ ಕ್ಲಬ್ ವತಿಯಿಂದ ಆ. 3ರಂದು ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ. ತಮ್ಮ ತಮ್ಮ ಸಹೋದರನಿಗೆ ರಾಖಿ ಕಟ್ಟುವ ಒಂದು ಸುಂದರವಾದ ಫೋಟೋವನ್ನು 7892038011 ನಂಬರ್‌ಗೆ ವ್ಯಾಟ್ಸಪ್ ಮಾಡಿದಲ್ಲಿ ಅದನ್ನು ರೋಟರಿ ಆನ್ಸ್ ಕ್ಲಬ್ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗುವುದು. ಅತಿ ಹೆಚ್ಚು ಲೈಕ್ಸ್ ಪಡೆದ ಫೋಟೋಗಳಿಗೆ ಬಹುಮಾನ ನೀಡಲಾಗುವುದು. ಸ್ಪರ್ಧೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಒಬ್ಬರು ಒಂದು ಫೋಟೋ ಮಾತ್ರ ಕಳುಹಿಸಬಹುದು ಎಂದು ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.