ನಿತ್ಯ ಭವಿಷ್ಯ: 04-08-2020

ಮೇಷ
ಉದ್ಯೋಗದಲ್ಲಿ ಅನೇಕ ಅಡೆತಡೆಗಳು ಬರುತ್ತಲೇ ಇರುತ್ತವೆ. ಬದಲಾವಣೆ ಆದರೂ ಆಶ್ಚರ್ಯವಿಲ್ಲ. ಮೂಗಿನ ನೇರದಲ್ಲಿ ಸಿಟ್ಟು ಒಳ್ಳೆಯದಲ್ಲ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸ್ವಾಭಾವಿಕ. ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗಲಿದ್ದೀರಿ.
ವೃಷಭ
ಉದ್ಯೋಗ ವ್ಯವಹಾರದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಆದಾಯ ಹೆಚ್ಚಾಗಲಿದೆ. ದೈವ ಬಲ ಸಾಧಾರಣವಾಗಿದ್ದು, ನಿಮ್ಮ ಕುಲದೇವರ ದರ್ಶನ ಮಾಡಿರಿ. ಈ ಮಧ್ಯೆ ಅಷ್ಟಮದ ಕೇತುವಿನ ಪ್ರತಿಕೂಲತೆಯಿಂದ ಆಗಾಗ ಆರೋಗ್ಯದ ಕಡೆಗೆ ಗಮನವಿರಲಿ.
ಮಿಥುನ
ಅಷ್ಟಮದಲ್ಲಿ ಶನಿ ಇರುವುದರಿಂದ ಆರೋಗ್ಯ ಆರ್ಥಿಕ ವಿಚಾರಗಳ ಬಗ್ಗೆ ನಾನಾ ರೀತಿಯ ಖರ್ಚುವೆಚ್ಚಗಳಿಂದ ಧನವ್ಯಯ. ಸಂಬಂಧಿಕರಿಂದ ಕೆಟ್ಟ ಮಾತು ಕೇಳಿ ಬರಲಿದೆ.
ಕರ್ಕಾಟಕ
ಶುಕ್ರ ರಾಹು ವ್ಯಯದಲ್ಲಿರುವುದರಿಂದ ಮನೆಯನ್ನು ಬದಲಾಯಿಸುವ ಚಿಂತನೆ ನಡೆಸುವಿರಿ. ಆರೋಗ್ಯವನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಕಷ್ಟು ಪ್ರಯತ್ನ ಪಡುವಿರಿ. ಹಿತಶತ್ರುಗಳ ಕಾಟ ಇರುತ್ತದೆ.
ಸಿಂಹ
ಏಕಾದಶದ ಲಾಭ ಸ್ಥಾನಗತನಾದ ರಾಹು ದೈವಾನುಗ್ರಹ ಇಲ್ಲದಾಗಲು ಉಪಶಮನ ತೋರಿ ಕೆಲಸ ಕಾರ್ಯಗಳು ನೀವೆಣಿಸಿದಂತೆ ನಡೆಯಲಿದೆ. ಪಂಚಮದಲ್ಲಿ ಗುರು ಇದ್ದಾನೆ. ಆದರೆ ಜೊತೆಗೆ ಕೇತು ಇರುವುದು ಸಮಸ್ಯೆಯಾಗಿದೆ.
ಕನ್ಯಾ
ಅಷ್ಟಮಾಧಿಪತಿ ಕುಜ ಸಪ್ತಮದಲ್ಲಿರುವುದರಿಂದ ಕುಟುಂಬದೊಳಗೆ ವಾದ –ವಿವಾದಗಳಿಂದ ಮಾನಸಿಕ ಕ್ಲೇಶ ಬರಲಿದೆ. ಮಾನಸಿಕ ಚಂಚಲತೆ ಬಾರದಂತೆ ಎಚ್ಚರಿಕೆ ವಹಿಸಿ. ಸತ್ಕರ್ಮಗಳು ನಡೆಯಲಿ.
ತುಲಾ
ಸುಖ ಸ್ಥಾನದಲ್ಲಿ ಶನಿ ಪಂಚಮಾಧಿಪತಿಯಾಗಿ ಇರುವುದರಿಂದ ಕಾರ್ಯಕ್ಷೇತ್ರದಲ್ಲಿ ಉದ್ವೇಗ ಹಸ್ತಕ್ಷೇಪಕ್ಕೆ ಎಡೆಯಾಗುವುದು. ದೂರ ಸಂಚಾರ, ನೀಚ ಜನರ ಒಡನಾಟ ಇತ್ಯಾದಿಗಳ ಸಾಧ್ಯತೆ ಇದೆ. ಸಹೋದರ ವರ್ಗದವರಿಗೆ ಸಹಾಯ ಒದಗಿ ಬರಲಿದೆ.
ವೃಶ್ಚಿಕ
ಉತ್ತಮವಾದ ದೈವಾನುಗ್ರಹವಿರುವುದರಿಂದ ಮತ್ತು ಶನಿ ತೃತೀಯದಲ್ಲಿರುವುದರಿಂದ ಹೆಚ್ಚಿನ ದುಡಿಮೆ,ಪ್ರಯತ್ನ ಬಲ ನಿಮ್ಮಲ್ಲಿದ್ದರೆ ನೀವು ಯಶಸ್ವಿಯಾಗುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ.
ಧನು
ಇತ್ತೀಚೆಗಿನ ದಿನಗಳಿಂದ ಸತತವಾಗಿ ಬಂದಿರುವ ಸಮಸ್ಯೆಗಳಿಂದ ಮಾನಸಿಕ ಸಮತೋಲನ ಕಳೆದುಕೊಂಡಿರುವಿರಿ. ಸಾಡೇಸಾತ್ ಶನಿ ಇರುವುದರಿಂದ ಎಲ್ಲಿಯೂ ತಾಳ್ಮೆ , ಸಮಾಧಾನ ಕಳೆದುಕೊಳ್ಳಬೇಡಿ.
ಮಕರ
ದೈವಬಲಹೀನವಾಗಿರುವ ನೀವು ತಪ್ಪುಗಳು ಪುನರಾವರ್ತನೆಯಾಗದಂತೆ ಜಾಗ್ರತೆ ವಹಿಸಿರಿ. ಧಾರ್ಮಿಕ ವಿಚಾರಕ್ಕೆ ಗಮನ ಹರಿಸಿದಲ್ಲಿ ಆದಷ್ಟು ಶಾಂತಿ ಸಮಾಧಾನ ಸಿಗಲಿದೆ. ನವಂಬರ್ 30ರ ನಂತರ ಗುರುಬಲ ಬರಲಿದೆ.
ಕುಂಭ
ಉತ್ತಮವಾದ ದೈವಾನುಗ್ರಹ ನಿಮಗೆ ಲಭಿಸುತ್ತದೆ.ನವಂಬರ್ 30ರ ವರೆಗೆ ನೀವೆಣಿಸಿದಂತೆ ಎಲ್ಲವೂ ಯಶಸ್ವಿಯಾಗಲಿದೆ. ಸಾಡೇಸಾತ್ ಶನಿಯ ಕಾಟವೂ ಆರಂಭದ ಹಂತದಲ್ಲಿರುವುದರಿಂದ ಅನಿರೀಕ್ಷಿತ ಆರೋಗ್ಯಹಾನಿ ತೋರಿಬರಲಿದೆ.
ಮೀನ
ನಿಮ್ಮೊಂದಿಗೆ ಕುಜನಿರುವುದರಿಂದ ʼನಾನುʼ ಎಂಬ ಅಹಂಕಾರದ ಭಾವನೆ ನಿಮ್ಮಲ್ಲಿ ಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ ಇರುತ್ತದೆ. ಕುಟುಂಬದಲ್ಲಿ ಪ್ರೀತಿ ಸಹನೆಯೊಂದಿಗೆ ಇರಲು ಪ್ರಯತ್ನಿಸಿ.

ಕೆ. ಸುಬ್ರಹ್ಮಣ್ಯ ಆಚಾರ್ಯ
ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ
ಹಿರಿಯಂಗಡಿ, ಕಾರ್ಕಳ. 97414 89529

error: Content is protected !!
Scroll to Top