ನಿತ್ಯ ಭವಿಷ್ಯ- 02-08-2020

ಮೇಷ

ದೈವಾನುಗ್ರಹ ಉತ್ತಮವಾಗಿರುವುದರಿಂದ ಹಿಂದಿನ ತೊಂದರೆಗಳು ಕಡಿಮೆಯಾಗಲಿವೆ. ಆದಾಯ ಉತ್ತಮವಾಗಲಿದೆ. ಆರೋಗ್ಯದ ಮೇಲೆ ಎಚ್ಚರವಿರಲಿ. ವಿವಾಹವಾಗಲು ಸಕಾಲವಾಗಲಿದೆ. 

ವೃಷಭ

ದೈವಾನುಗ್ರಹದ ಕೊರತೆ ಇರುವುದರಿಂದ ಆರೋಗ್ಯದ ಕಡೆಗೆ ಬಹಳ ಎಚ್ಚರವಹಿಸಬೇಕಾಗಿದೆ. ತಂದೆಯವರೊಂದಿಗೆ ಕಲಹಬೇಡ. ಪರಸ್ಪರ ಗೌರವಿರಲಿ. ಭೂಮಿ ಖರೀದಿ ಮಾಡಲು ಸಕಾಲವಾಗಿದೆ. 

ಮಿಥುನ

ಸಪ್ತಮದಲ್ಲಿ ಬುಧ ರಾಹು ಇರುವುದರಿಂದ ವಿವಾಹ ನಿಶ್ಚಯವಾದರೂ ತಪ್ಪುವ ಸಾಧ್ಯತೆಯೇ ಹೆಚ್ಚಾಗಿದೆ. ಶನಿ ಅಷ್ಟಮದಲ್ಲಿರುವಾಗ ಹಿರಿಯರೊಂದಿಗೆ ಕಲಹ ,ಅಪಘಾತದ ಸೂಚನೆ ಇದೆ. ಮೃತ್ಯುಂಜಯ ಜಪ ಮುಂದುವರಿಸಿರಿ.

ಕರ್ಕಾಟಕ

ದಾಂಪತ್ಯದಲ್ಲಿ ತೀವ್ರ ಬಿಕ್ಕಟ್ಟು ಸಂಭವ. ಹಿತಶತ್ರುಗಳಿದ್ದಾರೆ. ಎಲ್ಲರನ್ನು ಬಹಳ ಸುಲಭವಾಗಿ ನಂಬುವ ನೀವು ಬಿಕ್ಕಟ್ಟಿಗೆ ಸಿಲುಕುವಿರಿ. ಚಿನ್ನಾಭರಣಗಳನ್ನು ಖರೀದಿಸುವಿರಿ. ಹೊಸ ಉದ್ಯೋಗ ಪ್ರಾಪ್ತಿಯಾಗುವ ಯೋಗವಿದೆ.

ಸಿಂಹ

ಮಕ್ಕಳ ವಿಷಯವಾಗಿ ಭಿನ್ನಾಭಿಪ್ರಾಯ ಉಂಟಾಗಿ ಮನಸ್ಸಿನ ನೆಮ್ಮದಿ ಹಾಳಾಗಲಿದೆ. ಪ್ರೀತಿ, ಪ್ರೇಮಕ್ಕೆ ಬಲಿಯಾಗದಿರಿ. ಅಷ್ಟಮದ ಕುಜ ಅನೇಕ  ರೀತಿಯಲ್ಲಿ ತೊಂದರೆಗಳನ್ನು ನೀಡುವುದರಿಂದ ನಾಗದೇವರನ್ನು ಆರಾಧನೆ ಮಾಡುತ್ತಾ  ಬನ್ನಿರಿ.

ಕನ್ಯಾ

ನಿಮ್ಮ ಸಹೋದರ ವರ್ಗದವರ ದಾಂಪತ್ಯ ಕಲಹವನ್ನು ನೀವು ನೋಡಲಿದ್ದೀರಿ.ಭೂಮಿ ಸಂಬಂಧ ಕಲಹ ತಾರಕಕ್ಕೇರಲಿದೆ. ದೇವಿ ಅನುಗ್ರಹ ನಿಮ್ಮ ಮೇಲಿರುತ್ತದೆ. ನೂತನ ಉದ್ಯೋಗ ಪ್ರಾಪ್ತಿಯಾಗಲಿದೆ.

ತುಲಾ

ದೈವಾನುಗ್ರಹಕ್ಕಾಗಿ ಕುಲದೇವರನ್ನು ಪ್ರಾರ್ಥಿಸಿರಿ. ಸುಖ ಸ್ಥಾನದ  ಶನಿ ನಿಮ್ಮ ಕುಟುಂಬಸ್ಥರಿಗೆ ಸುಖದ ಕೊರತೆಯನ್ನು ನೀಡಲಿದ್ದಾನೆ. ಅಹಂಕಾರವನ್ನು ಬಿಟ್ಟುಬಿಡಿ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿರಿ. 

ವೃಶ್ಚಿಕ

ವಿದೇಶ ಪ್ರಯಾಣ ಯೋಗವಿದೆ. ಕುಟುಂಬದ ನೆರೆಹೊರೆಯವರಿಂದ ಆಗಾಗ ಕಿರಿಕಿರಿ ನಡೆಯುತ್ತಲೇ ಇರುತ್ತದೆ. ಚಾಡಿಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಆರ್ಥಿಕವಾಗಿ ಜಾಗ್ರತೆ ವಹಿಸಿ.

ಧನು

ವಿದೇಶ ಪ್ರಯಾಣ ಯೋಗವಿದೆ. ಕುಟುಂಬದ ನೆರೆಹೊರೆಯವರಿಂದ ಆಗಾಗ ಕಿರಿಕಿರಿ ನಡೆಯುತ್ತಲೇ ಇರುತ್ತದೆ. ಚಾಡಿಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಆರ್ಥಿಕವಾಗಿ ಜಾಗ್ರತೆ ವಹಿಸಿ.

ಮಕರ

ಜನ್ಮದ ಶನಿಯ ಕಾಟ ಹಲವು ರೀತಿಯಲ್ಲಿ ಸಮಸ್ಯೆಗಳಿಗೆ ಕಾರಣವಾಗಲಿದೆ. ಮೃತ್ಯುಂಜಯ ಜಪ ಪಠಿಸಿರಿ. ನೀವು ಮಾಡುವ ಉದ್ಯೋಗದಲ್ಲಿ ತಾಳ್ಮೆಯಿಂದ ವರ್ತಿಸಿರಿ. ವೃತ್ತಿರಂಗದಲ್ಲಿ ಭಿನ್ನಾಭಿಪ್ರಾಯ ಮೂಡಿಬರು ಸಾಧ್ಯತೆಗಗಳಿವೆ.

ಕುಂಭ

ಜನ್ಮದ ಶನಿಯ ಕಾಟ ಹಲವು ರೀತಿಯಲ್ಲಿ ಸಮಸ್ಯೆಗಳಿಗೆ ಕಾರಣವಾಗಲಿದೆ. ಮೃತ್ಯಂಜಯ ಜಪ ಪಠಿಸಿರಿ. ನೀವು ಮಾಡುವ ಉದ್ಯೋಗದಲ್ಲಿ ತಾಳ್ಮೆಯಿಂದ ವರ್ತಿಸಿರಿ. ವೃತ್ತಿರಂಗದಲ್ಲಿ ಭಿನ್ನಾಭಿಪ್ರಾಯ ಮೂಡಿಬರಲಿದೆ. 

ಮೀನ

ಯಾವುದೋ ಕೃತ್ರಿಮ ಬಾಧೆ ಬಾಧಿಸುತ್ತಿದೆ ಎಂಬ ಭಾವನೆ ನಿಮಗೆ ಅನಿಸಲು ಆರಂಭಿಸಲಿದೆ. ಆತಂಕ ಬೇಡ. ನಿಮ್ಮ ಗಡಿಬಿಡಿ ಸ್ವಭಾವವೇ ಎಷ್ಟೋ ಬಾರಿ ಸಮಸ್ಯೆ ತರಲಿದೆ. ತಾಳ್ಮೆ ಇರಲಿ.


ಜ್ಯೋತಿಷ್ಯರು

ಕೆ. ಸುಬ್ರಹ್ಮಣ್ಯ ಆಚಾರ್ಯ, ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ, ಹಿರಿಯಂಗಡಿ, ಕಾರ್ಕಳ. ಸಂಪರ್ಕ ಮಾಹಿತಿ: 97414 89529, 8073973603

 

error: Content is protected !!
Scroll to Top