ಉಡುಪಿ : ಶ್ರದ್ಧಾಕೇಂದ್ರಗಳಲ್ಲಿ ಜನಸಂದಣಿ ಕಂಡು ಬಂದರೆ ಕೊರೊನಾ ವೈರಸ್ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ನಾಗರ ಪಂಚಮಿ ಹಬ್ಬವನ್ನು ಎಲ್ಲರೂ ತಮ್ಮ ಮನೆಯಲ್ಲೇ ಆಚರಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಯವರು ನಾಗರಪಂಚಮಿ ಹಬ್ಬಕ್ಕೆ ತಡೆ ಹೇರಿದ್ದಾರೆ ಎಂಬುದಾಗಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಜು. 24ರಂದು ಸ್ಪಷ್ಟೀಕರಣ ನೀಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶದಂತೆ ಈ ವರ್ಷ ಯಾವುದೇ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳುವಂತಿಲ್ಲ. ಸಾಮಾಜಿಕ ಅಂತರ ಪಾಲನೆ ಮಾಡಿದರೂ ವೈರಸ್ ಹರಡುವ ಅಪಾಯವಿರುವುದರಿಂದ ಎಲ್ಲರೂ ಅವರವರ ಮನೆಯಲ್ಲೇ ಹಬ್ಬವನ್ನು ಅಚರಿಸಬೇಕು. ಮನೆಯಲ್ಲಿ ಹಬ್ಬ ಅಚರಿಸುವುದಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಈ ಕುರಿತಾಗಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಡಿಸಿ ಹೇಳಿದರು.