ದಿಲ್ಲಿ:ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆಗಳು ಒಂದೊಂದಾಗಿ ಶುರುವಾಗುತ್ತಿವೆ.ಇದೀಗ ಐಪಿಎಲ್ ಸರದಿ. ಗಲ್ಫ್ ದೇಶದಲ್ಲಿ ಈ ಸಲದ ಐಪಿಎಲ್ ಕೂಟಗಳು ನಡೆಯಲಿವೆ.ಪೋರ್ಣ ಪ್ರಮಾಣದ ಐಪಿಎಲ್ ಕೂಟವನ್ನೇ ನಡೆಸುವುದಾಗಿ ಹೇಳಿದ್ದ ಬಿಸಿಸಿಐ ಇದೀಗ ಕೂಟದ ದಿನಾಂಕವನ್ನು ಘೋಷಿಸಿ ಕ್ರಿಕೆಟ್ ಪ್ರೇಮಿಗಳಲ್ಲಿ ಪುಳಕವುಂಟು ಮಾಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ 2020 ಆವೃತ್ತಿಯು ಸೆಪ್ಟೆಂಬರ್ 19 ರಂದು ಪ್ರಾರಂಭವಾಗಲಿದೆ ಮತ್ತು ಫೈನಲ್ ನವೆಂಬರ್ 8 ರಂದು ನಡೆಯಲಿದೆ.
ಈ ಪಂದ್ಯಾವಳಿ ಯುಎಇಯಲ್ಲಿ ನಡೆಯಲಿದ್ದು, ಭಾರತ ಸರ್ಕಾರದಿಂದ ಅನುಮತಿ ಬಾಕಿ ಉಳಿದಿದೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮತ್ತು ಎಸ್‌ಎಲ್‌ಸಿ, ಐಪಿಎಲ್‌ಗೆ ಆತಿಥ್ಯ ವಹಿಸುವ ಪ್ರಸ್ತಾಪದೊಂದಿಗೆ ಬಿಸಿಸಿಐ ಅನ್ನು ಸಂಪರ್ಕಿಸಿತ್ತು, ಅದಕ್ಕೆ ಅಗತ್ಯವಾದ ಮೂಲಸೌಕರ್ಯಗಳಿವೆ ಎಂದು ತಿಳಿಸಿತ್ತು.
ನಿಜಕ್ಕಾದರೆ ಎಪ್ರಿಲ್ –ಮೇ ತಿಂಗಳಲ್ಲಿ ಐಪಿಎಲ್ ಕೂಟ ನಡೆಯಬೇಕಿತ್ತು. ಆದರೆ ಕೊರೊನಾದಿಂದಾಗಿ ಮುಂದೂಡಲ್ಪಟ್ಟ ಕೂಟ ಈಗ ದೇಶದಿಂದಲೇ ಹೊರಗೆ ನಡೆಯಲಿದೆ.