ಬೆಂಗಳೂರು, ಜು.25: ರಾಜ್ಯದಲ್ಲಿ ಕೊರೊನಾ ಹಾವಳಿ ಅವ್ಯಾಹತವಾಗಿ ಮುಂದುವರಿದಿದೆ.ಮತ್ತೊಮ್ಮೆ ಒಂದೇ ದಿನದಲ್ಲಿ ಐದು ಸಾವಿರದ ಗಡಿಯನ್ನು ದಾಟಿ ಕೇಕೆ ಹಾಕುತ್ತಿದೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯೂ ಶತಕ ದಾಟಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85,000 ತಲುಪಿದೆ.
ಶುಕ್ರವಾರ ಸಂಜೆಗಾಗುವಾಗಲೇ ಒಂದು ದಿನದ ಸೋಂಕಿನ ಸಂಖ್ಯೆ 5007 ದಾಟಿತ್ತು. 110 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲೀಗ ಒಟ್ಟು ಸೋಂಕಿತರ ಸಂಖ್ಯೆ 85,870 ಕ್ಕೇರಿದೆ.
ಇದೇ ವೇಳೆ ನಿತ್ಯ ಸರಾಸರಿಯಾಗಿ 2037 ಮಂದಿ ಗುಣಮುಖರಾಗುತ್ತಿದ್ದಾರೆ. ಒಟ್ಟಾರೆ 1732 ಮಂದಿ ಸಾವನ್ನಪ್ಪಿದ್ದಾರೆ.ಪ್ರಸ್ತುತ ರಾಜ್ಯದಲ್ಲಿ 52,791 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 611 ಮಂದಿ ತೀರಾ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.