19 ಶಾಸಕರನ್ನು ಇಟ್ಟುಕೊಂಡು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ-ಪೈಲಟ್‌ ಕಾಲೆಳೆದ ಸಿಬಲ್‌

ದಿಲ್ಲಿ : ಸರಕಾರದ ವಿರುದ್ಧ ಬಂಡೆದ್ದಿರುವ ಸಚಿನ್‌ ಪೈಲಟ್‌ ಕಾಲೆಳೆದಿರುವ ಹಿರಿಯ ನಾಯಕ ಕಪಿಲ್‌ ಸಿಬಲ್‌ ಕೇವಲ 20-25 ಶಾಸಕರ ಬೆಂಬಲದೊಂದಿಗೆ ನೀವು ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ.

ನೀವು ಮುಖ್ಯಮಂತ್ರಿಯಾಗಲು ಬಯಸುತ್ತೀರಾ? ನಮಗೆ ಹೇಳಿ. ಪ್ರತಿಭಟನೆ ಏಕೆ ? ನೀವು ಬಿಜೆಪಿಗೆ ಸೇರುತ್ತಿಲ್ಲ ಎಂದಾದರೆ ಹರ್ಯಾಣದಲ್ಲಿ ಏಕೆ ಕುಳಿತಿದ್ದೀರಿ? ನೀವು ಕಾಂಗ್ರೆಸ್ ಸಭೆಗಳಲ್ಲಿ ಏಕೆ ಭಾಗವಹಿಸಲಿಲ್ಲ? ಎಂದು ಸಚಿನ್ ಗೆ ಸಿಬಲ್‌ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ನೀವು ನಿಮ್ಮ ಸ್ವಂತ ಪಕ್ಷವನ್ನು ರಚಿಸಲು ಬಯಸುತ್ತೀರಾ? ಅದು ಏನೇ ಇರಲಿ, ಹೊರಗೆ ಬಂದು ಮಾತನಾಡಿ. ಹೋಟೆಲ್ ಒಳಗೆ ಕುಳಿತುಕೊಳ್ಳಬೇಡಿ. ನಿಮ್ಮ ನಡೆಗಳು  ಪಕ್ಷ ತಲೆಗಗ್ಗಿಸುವಂತೆ ಮಾಡಿವೆ.  ಜನರ ಮುಂದೆ  ಮುಂದೆ ನೀವು ಪಕ್ಷವನ್ನು ಹಾಸ್ಯಾಸ್ಪದ ಮಾಡಲು ಸಾಧ್ಯವಿಲ್ಲ. ಅದು ನಿಮ್ಮ ಉದ್ದೇಶವಲ್ಲ ಎಂದು ನನಗೆ ಖಾತ್ರಿಯಿದೆ ಎಂದು ಸಿಬಲ್ ಮನವೊಲಿಸುವ ಪ್ರಯತ್ನವನ್ನೂ ಮಾಡಿದ್ದಾರೆ.  

ರಾಜಸ್ಥಾನದಲ್ಲಿ ಕಾಂಗ್ರೆಸ್ ಅಲ್ಪಬಹುಮತವನ್ನಷ್ಟೇ ಹೊಂದಿದೆ.  200 ಸದಸ್ಯರ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತಕ್ಕೆ 101 ಸ್ಥಾನಗಳು ಅಗತ್ಯವಿದ್ದು , ಕಾಂಗ್ರೆಸ್‌ ಇದಕ್ಕಿಂತ ಎರಡು ಸ್ಥಾನಗಳನ್ನು ಮಾತ್ರ ಹೆಚ್ಚು ಹೊಂದಿದೆ. ಸಚಿನ್‌ ಪೈಲಟ್‌ ಗುಂಪಿನಲ್ಲಿ 19 ಶಾಸಕರು ಗುರುತಿಸಿಕೊಂಡಿದ್ದಾರೆ. . ಬಿಜೆಪಿ  72  ಶಾಸಕರ ಬಲವನ್ನು ಹೊಂದಿದೆ. ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಸದಸ್ಯರನ್ನು ಒಳಗೊಂಡಂತೆ, ಪ್ರತಿಪಕ್ಷಗಳು ಒಟ್ಟು 97 ಸದಸ್ಯರನ್ನು ಹೊಂದಿವೆ.ಹಿಗಾಗಿ ಸಚಿನ್‌ ಗುಂಪಿನ ಬೆಂಬಿ ಗೆಹ್ಲೊಟ್ ಗೆ ಅನಿವಾರ್ಯ.









































error: Content is protected !!
Scroll to Top