ನಂದಳಿಕೆ : ಕಾರು-ಲಾರಿಗೆ ಢಿಕ್ಕಿ

ಕಾರ್ಕಳ : ಕಾರ್ಕಳ ತಾಲೂಕು ನಂದಳಿಕೆ ಬಳಿಯಲ್ಲಿ ಕಾರೊಂದು ಲಾರಿಗೆ ಢಿಕ್ಕಿ ಹೊಡೆದ ಘಟನೆ ಆ. 2ರಂದು ಸಂಭವಿಸಿದೆ. ಕಾರ್ಕಳ ಕಡೆಯಿಂದ ಬೆಳ್ಮಣ್‌ ಕಡೆಗೆ ಸಾಗುತ್ತಿದ್ದ ಕಾರು (KA-19-MA-2963) ಲಾರಿಗೆ (KA-20-AA-4107) ಢಿಕ್ಕಿ ಹೊಡೆದಿದ್ದು, ಪರಿಣಾಮ ಲಾರಿಯ  ಮುಂಭಾಗ ಹಾಗೂ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರು ಸಣ್ಣಪುಣ್ಣ ಗಾಯಗೊಂಡಿರುತ್ತಾರೆ ಎಂದು ತಿಳಿದುಬಂದಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top