ಕುಂದಾಪುರ ಕಡಲ ತೀರಕ್ಕೆ ಬಂದ ಅಪರೂಪದ ಅತಿಥಿ

ಕುಂದಾಪುರ , ಆ. 14: ಕೋಡಿ ಕುಂದಾಪುರ  ಕಡಲ ತೀರಕ್ಕೆ ಬಂದ ಅಪರೂಪದ ಹಕ್ಕಿಯೊಂದು ಈಗ ಕುಂದಾಪುರದ ರೀಫ್‌ ವಾಚ್‌ ಮೆರಿನ್‌ ಕನ್ಸರ್ವೇಶನ್‌  ಸೆಂಟರ್‌ ನಲ್ಲಿ ಪಶುವೈದ್ಯ ಡಾ. ಶಂತನು ಕಲಂಬಿ ಅವರಿಂದ ಆರೈಕೆ ಪಡೆಯುತ್ತಿದೆ.

ಮಾಸ್ಕ್ ಡ್‌ ಬೂಬಿ ಎಂದು ಕರೆಯಲಾಗುವ ಈ ಕಡಲ ಹಕ್ಕಿ ಸೋಮವಾರ ಮಲ್ಪೆ ತೀರದಲ್ಲಿ ಗಾಯಗೊಂಡು ನಿಶ್ಶಕ್ತ ಸ್ಥಿತಿಯಲ್ಲಿತ್ತು. ಕಳೆದಾ ವಾರ ಗಾಳಿಯ ವೇಗ ಹೆಚ್ಚಿದ್ದ ಕಾರಣ ಈ ಹಕ್ಕಿ ತೀರಕ್ಕೆ ಬಂದು ಬಿದ್ದಿರಬಹುದು ಎನ್ನಲಾಗಿದೆ. ಹಕ್ಕಿಯ ರೆಕ್ಕೆಗೆ ಗಾಯಗಳಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದೆ.

ಶಾಂತ ಸಾಗರ ಮತ್ತು ಅಟ್ಲಾಂಟಿಕ್‌ ಸಾಗರ ತೀರದಲ್ಲಿ ಹೆಚ್ಚಾಗಿ ಕಂಡು ಬರುವ ಈ ಹಕ್ಕಿ ಭಾರತದಲ್ಲಿ ಅಪರೂಪಕ್ಕೊಮ್ಮೆ ಕೇರಳ ಅಥವಾ  ಮುಂಬಯಿಗೆ ಬರುವುದುಂಟು.  ಹೆಚ್ಚು ಕಡಿಮೆ 3 ಅಡಿಯಷ್ಟಿರುವ ಹಕ್ಕಿ ರೆಕ್ಕೆ ಬಿಚ್ಚಿದರೆ 5 ಅಡಿಯಷ್ಟಾಗುತ್ತದೆ. 90 ಅಡಿ ಎತ್ತರದಿಂದ ಸಮುದ್ರಕ್ಕೆ ಡೈವ್‌ ಹೊಡೆಯುವ ಸಾಮರ್ಥ್ಯ ಈ ಹಕ್ಕಿಗಳಿಗಿದೆ.









































































































error: Content is protected !!
Scroll to Top