ನಿತ್ಯ ಭವಿಷ್ಯ-05-08-2020

ಮೇಷ
ಉತ್ತಮ ಉದ್ಯೋಗ ಪ್ರಾಪ್ತಿಯಾಗಿದೆ. ಸೌಮ್ಯವಾಗಿ ವರ್ತಿಸಿ. ಖರ್ಚುವೆಚ್ಚಗಳು ನಿಮ್ಮ ಹಿಡಿತದಲ್ಲಿರಲಿ. ಉಸಿರಾಟದ ಕಿರಿಕಿರಿ ನಿಮ್ಮನ್ನು ಬಹಳ ಸಮಯದಿಂದ ಕಾಡುತ್ತಿರುತ್ತದೆ. ಸುರಕ್ಷೆಯ ಸಾಧನಗಳನ್ನು ಧರಿಸುವುದನ್ನು ಮರೆಯಬೇಡಿ.
ವೃಷಭ
ಧನಾಧಿಪತಿ ಚಂಚಲತೆಯನ್ನು ತೋರಿಸುತ್ತಿರುತ್ತಾನೆ. ಉದ್ಯೋಗ ಕ್ಷೇತ್ರದಲ್ಲಿ ನೀವಾಡುವ ನಿಷ್ಠುರದ ಮಾತುಗಳು ಆಗಾಗ ಅಸಮಾಧಾನಕ್ಕೆ ಕಾರಣವಾಗುತ್ತಿರುತ್ತದೆ. ಪದೇಪದೆ ಕೈಕೊಡುವ ಅನಾರೋಗ್ಯ ಬೇಸರ ತರಲಿದೆ.
ಮಿಥುನ
ಸಾಂಸಾರಿಕ ಬೇಡಿಕೆಗಳು ನಿಮ್ಮ ಆರ್ಥಿಕ ಸ್ಥಿತಿಯನ್ನು ಬರಿದುಗೊಳಿಸಲಿವೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಗಣಪತಿ ದೇವರನ್ನು ಪ್ರಾರ್ಥಿಸಿರಿ. ಆಹಾರ ಸೇವನೆ ಮಾಡುವಾಗ ಎಚ್ಚರವಿರಲಿ.
ಕರ್ಕಾಟಕ
ನೌಕರ ವರ್ಗದವರಿಗೆ ಬಡ್ತಿ ಯೋಗವಿದೆ. ವಿವಾಹಕ್ಕೆ ಯೋಗ್ಯವಾದ ಕಾಲವಲ್ಲ. ಬಹುದಿನಗಳಿಂದ ನೀವು ಎಣಿಸಿದ ಕಾರ್ಯಗಳು ನಡೆಯದೆ ನಿರಾಶೆ ಪಡುವಿರಿ. ಸಾಂಸಾರಿಕವಾಗಿ ಬರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಸಿಂಹ
ನಿರುದ್ಯೋಗಿಗಳಿಗೆ ಅನಿರೀಕ್ಷಿತವಾಗಿ ಉದ್ಯೋಗ ಲಭಿಸಲಿದೆ. ರಾಜಕೀಯ ವರ್ಗದವರಿಗೆ ಗೊಂದಲಗಳು ಕಾಡಲಿವೆ. ಮನೆಯಲ್ಲಿ ಮಂಗಲ ಕಾರ್ಯಗಳು ಜರಗಲಿವೆ. ಧನಾಗಮನಕ್ಕೆ ಯಾವುದೇ ಕೊರತೆ ಇರುವುದಿಲ್ಲ.
ಕನ್ಯಾ
ಧೈರ್ಯ ಸರ್ವತ್ರ ಸಾಧನಂ ಎಂಬುದನ್ನು ಮರೆಯಬೇಡಿ. ವಿದ್ಯಾರ್ಥಿಗಳಿಗೆ ಅನೇಕ ಅಡಚಣೆ ಇದ್ದರೂ ಯಶಸ್ವಿಯಾಗುವಿರಿ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದೆ. ಮನೆ ವಾಹನ ಖರೀದಿ ಮಾಡುವಿರಿ.
ತುಲಾ
ಕೋರ್ಟು ಕಚೇರಿ ಕಾರ್ಯ ಭಾಗದಲ್ಲಿ ಧನ ವ್ಯಯವಾದರೂ ತೀರ್ಪು ನಿಮ್ಮದಾಗಲಿದೆ. ವಿದಾರ್ಥಿಗಳು ಪ್ರಯತ್ನಿಸಿದ್ದಲ್ಲಿ ಯಶಸ್ವಿಯಾಗುವಿರಿ. ಆರೋಗ್ಯಕ್ಕಾಗಿ ವೈದ್ಯರನ್ನು ಭೇಟಿ ಮಾಡುವ ಪ್ರಮೇಯ ಬಂದೀತು. ಸೂಕ್ತ ಔಷಧೋಪಾಚಾರ ಮಾಡಿಕೊಳ್ಳುವುದು ಅಗತ್ಯ.
ವೃಶ್ಚಿಕ
ಅಷ್ಟಮದ ರಾಹುನಿಂದಾಗಿ ಅಪವಾದ ಭೀತಿ ಬರಬಹುದು. ನಿಮ್ಮ ಸುತ್ತಮುತ್ತಲಿನ ಗೊಂದಲಗಳು ಮುಂದುವರಿದುಕೊಂಡೇ ಇರುತ್ತವೆ. ಖರ್ಚುವೆಚ್ಚಗಳ ಕಡೆಗೆ ಗಮನ ಕೊಡುತ್ತಲೇ ಬರಬೇಕು. ಉದ್ಯೋಗದಲ್ಲಿ ಬದಲಾವಣೆ ನಿರೀಕ್ಷಿತ.
ಧನು
ಸಾಡೇಸಾತ್ ಶನಿಯ ಕಾಟವಿರುವುದರಿಂದ ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಶತ್ರುಗಳು ತಾವಾಗಿಯೇ ಬರಲಿದ್ದಾರೆ. ಪ್ರವಾಸ ಮಾಡಲಿದ್ದೀರಿ.
ಮಕರ
ಸಾಡೇಸಾತ್ ಶನಿಯ ಕಾಟವಿರುವುದರಿಂದ ಹಿತಶತ್ರುಗಳು ನಿಮ್ಮನ್ನು ಅಪವಾದ, ನಿಂದನೆಗಳಿಗೆ ಗುರಿ ಮಾಡಲಿದ್ದಾರೆ. ತಾಳ್ಮೆ , ಸಮಾಧಾನ ಚಿತ್ತದಿಂದ ಮುಂದುವರಿಯಿರಿ. ಮಾತು ಕಡಿಮೆ ಇರಲಿ. ಖರ್ಚಿನ ಮೇಲೆ ಹಿಡಿತವಿರಲಿ.
ಕುಂಭ
ಶ್ರೀಯಾನಿ ಬಹು ವಿಘ್ನಾನಿ. ನೀವು ಮಾಡುವ ಯಾವುದೇ ಒಳ್ಳೆಯ ಕೆಲಸಗಳಿಗೆ ವಿಘ್ನಗಳು ಬರುತ್ತಲೇ ಇರುತ್ತವೆ. ಆಸ್ತಿ ಸಂಬಂಧ ಸಹೋದರರ ನಡುವೆ ವಿವಾದವಿರುತ್ತದೆ. ಸಾಡೇಸಾತ್ ಶನಿಯ ಕಾಟವಿರುತ್ತದೆ.
ಮೀನ
ಕುಟುಂಬದ ಮಧ್ಯೆ ಇರುವ ಹಲವಾರು ಅಸಮಾಧಾನಗಳು ಪರಿಹಾರಗೊಳ್ಳಲಿವೆ. ನೀವು ಮೆಚ್ಚಿರುವ ಹುಡುಗಿಯ ಕೈ ಹಿಡಿಯುವ ಹೊತ್ತು. ಆರೋಗ್ಯದ ಬಗ್ಗೆ ಉದಾಸೀನತೆ ಬೇಡ. ಸಂಸಾರದಲ್ಲಿ ಹೊಂದಾಣಿಕೆ ಇರಲಿ.

ಕೆ. ಸುಬ್ರಹ್ಮಣ್ಯ ಆಚಾರ್ಯ
9741489529





























































error: Content is protected !!
Scroll to Top